ಲಕ್ನೋ: ಆರ್‌ಸಿಬಿ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಟಿ20ಯಲ್ಲಿ ಒಂದೇ ತಂಡಕ್ಕೆ 9,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ 2025 ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಏಕಾನಾ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್
2008 ರ ಐಪಿಎಲ್ ಉದ್ಘಾಟನಾ ಋತುವಿನಿಂದಲೂ ಕೊಹ್ಲಿ ಆರ್‌ಸಿಬಿ ಪರ ಆಟ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಫ್ರಾಂಚೈಸಿಗಾಗಿ 8,579 ರನ್‌ಗಳನ್ನು ಗಳಿಸಿದ್ದಾರೆ. ಈಗ ಸ್ಥಗಿತಗೊಂಡಿರುವ ಚಾಂಪಿಯನ್ಸ್ ಲೀಗ್ ಟಿ20 ಯಲ್ಲಿ 424 ರನ್‌ಗಳನ್ನು ಗಳಿಸಿದ್ದಾರೆ. ಎರಡೂ ಸೇರಿದರೆ 9000 ರನ್ ಪೂರೈಸಿದಂತಾಗುತ್ತದೆ.
ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಗೂ ಬಿಡಿಸಲಾರದ ನಂಟು. ಕ್ರಿಕೆಟ್ ಆಡುವವರೆಗೂ ತಾನು ಆರ್‌ಸಿಬಿ ಆಟಗಾರನಾಗಿರುತ್ತೇನೆ ಎಂದು ಕೊಹ್ಲಿ ಹಲವಾರು ಬಾರಿ ಘೋಷಿಸಿದ್ದಾರೆ. ಇದನ್ನೂ ಓದಿ: LSG vs RCB: ಜೋಶ್ ಹ್ಯಾಜಲ್‌ವುಡ್ ಇಂದು ಪಂದ್ಯಕ್ಕೆ ಮಿಸ್ ಆಗಿದ್ಯಾಕೆ?
ಪಂದ್ಯವನ್ನು ಗೆದ್ದು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಆಶಯದೊಂದಿಗೆ ಆರ್‌ಸಿಬಿ 228 ರನ್‌ಗಳ ಬೃಹತ್ ಸ್ಕೋರ್ ಅನ್ನು ಬೆನ್ನಟ್ಟಿದೆ.
ತಂಡವೊಂದರ ಪರ ಅತಿ ಹೆಚ್ಚು ರನ್ ಸಾಧನೆ ಮಾಡಿದ ಆಟಗಾರರು
9004* – ಆರ್‌ಸಿಬಿ ಪರ ವಿರಾಟ್ ಕೊಹ್ಲಿ
6060 – ಎಂಐ ಪರ ರೋಹಿತ್ ಶರ್ಮಾ
5934 – ಹ್ಯಾಂಪ್‌ಶೈರ್ ಪರ ಜೇಮ್ಸ್ ವಿನ್ಸ್
5528 – ಸಿಎಸ್‌ಕೆ ಪರ ಸುರೇಶ್ ರೈನಾ
5314 – ಸಿಎಸ್‌ಕೆ ಪರ ಎಂಎಸ್ ಧೋನಿ