ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ಗೆ 27 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದ ರಿಷಭ್ ಪಂತ್ (Rishabh Pant) ಭಾರೀ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿದಿದ್ದರು. ಆದ್ರೆ ಆರಂಭಿಕ ಪಂದ್ಯದಿಂದಲೂ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಟ್ರೋಲ್‌ಗೆ ಒಳಗಾಗಿದ್ದ ಪಂತ್ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
AN ICONIC HUNDRED CELEBRATION BY RISHABH PANT. 🥶pic.twitter.com/erSVAEHyz4
— Mufaddal Vohra (@mufaddal_vohra) May 27, 2025
7 ವರ್ಷಗಳ ಬಳಿಕ ಶತಕ ಸಿಡಿಸಿದ ಪಂತ್ ಮೈದಾನದಲ್ಲಿಯೇ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದು 7 ವರ್ಷಗಳ ಬಳಿಕ ಪಂತ್ ಸಿಡಿಸಿದ ಶತಕವಾಗಿದೆ. 2018ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಇಂಡಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದ ಪಂತ್ ಅಜೇಯ 128 ರನ್ (63 ಎಸೆತ, 7 ಸಿಕ್ಸರ್, 15 ಬೌಂಡರಿ) ಬಾರಿಸಿದ್ದರು. ಆದ್ರೆ ಆ ಪಂದ್ಯದಲ್ಲೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೇರ್‌ಡೆವಿಲ್ಸ್ ಸೋತಿತ್ತು.
ಈ ಆವೃತ್ತಿಯ ಆರಂಭದಿಂದಲೂ ಲಕ್ನೋ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತು. ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 209 ರನ್‌ಗಳಿಸಿತ್ತು. ಆದ್ರೆ ಆ ಪಂದ್ಯದಲ್ಲೂ ರಿಷಭ್ ಪಂತ್ ಶೂನ್ಯ ಸುತ್ತಿದರು. ಬಳಿಕ ನಡೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ 63 ರನ್ ಗಳಿಸಿತ್ತಾದರೂ 49 ಎಸೆತಗಳನ್ನು ತೆಗೆದುಕೊಂಡಿದ್ದರು. ಇದೂ ಸಹ ಪಂತ್ ವಿರುದ್ಧ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿತ್ತು. ಆದ್ರೆ ಲೀಗ್ ಪಂದ್ಯದಲ್ಲಿ ಪಂತ್ ಅಬ್ಬರಿಸಿದ ರೀತಿ ಕಂಡು ಫ್ಯಾನ್ಸ್ ದಂಗಾಗಿದ್ದಾರೆ.
ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕಿಳಿದ ಪಂತ್ 54 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಸಹಿತ ಶತಕ ಪೂರೈಸಿದರು. ಒಟ್ಟು ತಾವು ಎದುರಿಸಿದ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ 118 ರನ್ ಗಳಿಸಿ ಅಜೇಯರಾಗುಳಿದರು.