ಬೆಂಗಳೂರು: ದೇಶದಲ್ಲಿ ಮುಂಗಾರು ಅಬ್ಬರ ಶುರುವಾಗಿರೋ ಹೊತ್ತಲ್ಲೇ ಹವಾಮಾನ ಇಲಾಖೆ ಮತ್ತೊಂದು ಶುಭಸುದ್ದಿ ನೀಡಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ ಆಗಲಿದ್ದು, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಯ ಪ್ರಮಾಣ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು, ರಾಜ್ಯದಲ್ಲಿ ಮುಂಗಾರು ಆರ್ಭಟಕ್ಕೆ ಜನ ತತ್ತರಿಸಿದ್ದು, ಕೊಡಗು ಹಾಗೂ ಹಾವೇರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಥಣಿಯ ನಾಗನೂರು ಗ್ರಾಮದಲ್ಲಿ ಎತ್ತಿನಗಾಡಿ ಹಳ್ಳಕ್ಕೆ ಬಿದ್ದು ಇಬ್ಬರು ಮಕ್ಕಳಾದ ಗಣೇಶ ಸಂಜು ಕಾಂಬಳೆ (9), ದೀಪಕ್ ಸಂಜು ಕಾಂಬಳೆ (11)ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉರ್ದುಗೆ 100 ಕೋಟಿ – ಕನ್ನಡಕ್ಕೆ ಬರೀ 32 ಕೋಟಿನಾ..? – ಬಿಜೆಪಿ ಪೋಸ್ಟರ್ ತಂತ್ರಕ್ಕೆ ಸಿಎಂ ಕೆಂಡ
ದಕ್ಷಿಣಕನ್ನಡದಲ್ಲಿ ಮಳೆ ಆರ್ಭಟ ಜೋರಾಗಿತ್ತು. ಮಂಗಳೂರಿನ ಬಜಾಲ್ ಜಲ್ಲಿಗುಡ್ಡೆಯ ಒಂದು ಭಾಗದ ಮಣ್ಣು ಕುಸಿದು 150 ಕ್ಕೂ ಹೆಚ್ಚು ಮನೆಗಳಿಗೆ ತೊಂದರೆ ಉಂಟಾಗಿದೆ. ರಾಮಕುಂಜ ಎಂಬಲ್ಲಿ ಬೃಹತ್ ಮರವೊಂದು ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪಾರಾಗಿದ್ದಾರೆ. ನೇತ್ರಾವತಿಯಲ್ಲಿ ನೀರು ಹೆಚ್ಚಾಗಿದೆ. ಇದನ್ನೂ ಓದಿ: ಮಂಗಳೂರು| ತಲ್ವಾರ್‌ನಿಂದ ದಾಳಿ ನಡೆಸಿ ಯುವಕನ ಬರ್ಬರ ಹತ್ಯೆ
ಮಳೆ ಆರ್ಭಟದಿಂದ ಉಡುಪಿಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಚಿಕ್ಕಮಗಳೂರಿನ ಕೊಪ್ಪದ ಬಿಂತ್ರವಳ್ಳಿ ಗ್ರಾಮದಲ್ಲಿ ಧರೆ ಕುಸಿದು ಮನೆ ಮುಂದೆ ಕಲ್ಲು-ಮಣ್ಣು ಬಂದು ನಿಂತಿದ್ದು, ಕೂದಲೆಳೆ ಅಂತರದಲ್ಲಿ ಮನೆಯಲಿದ್ದವರು ಪಾರಾಗಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗಿದ್ದು. ಪ್ರವಾಸಿಗರು ಹುಚ್ಚಾಟದಲ್ಲಿ ತೊಡಗಿದ್ದಾರೆ. ಹಾಸನ ಜಿಲ್ಲೆಯಲ್ಲೂ ಅಲ್ಲಲ್ಲಿ ಮನೆಗಳು ಕುಸಿತವಾಗಿದೆ. ಹೇಮಾವತಿ ಡ್ಯಾಮ್‌ನ ಒಳಹರಿವು ಹೆಚ್ಚಿದೆ. ಒಂದೇ ದಿನಕ್ಕೆ 8,004 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಇದನ್ನೂ ಓದಿ: IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?
ಸಕಲೇಶಪುರದ ಗುಡ್ಡಕುಸಿತ ಸ್ಥಳಕ್ಕೆ ವಿಪಕ್ಷ ನಾಯಕ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಡಗಿನಲ್ಲೂ ಮಳೆ ನಾನಾ ಅವಾಂತರ ಸೃಷ್ಟಿಸಿದೆ. ಎನ್‌ಡಿಆರ್‌ಎಫ್ ತಂಡ ಮಡಿಕೇರಿ ನಗರಕ್ಕೆ ಆಗಮಿಸಿದೆ. ಕೆಆರ್‌ಎಸ್‌ಗೆ ಒಂದೇ ದಿನ 3 ಅಡಿ ನೀರು ಬಂದಿದ್ದು, 93 ಅಡಿ ಆಗಿದೆ. ಕೊಪ್ಪಳದ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ 12 ಟಿಎಂಸಿ ನೀರು ಸಂಗ್ರಹವಾಗಿದೆ. ಬೆಳಗಾವಿಯಲ್ಲಿ ಕೃಷ್ಣಾ, ದೂದಗಂಗಾ, ವೇದಗಂಗಾ ಹಿರಣ್ಯಕೇಶಿ ನದಿಗಳ ನೀರಿನ ಮಟ್ಟ ಏರಿಕೆ ಆಗಿದೆ. ಇದನ್ನೂ ಓದಿ: ಗ್ರಾಮೀಣ ಯುವಸಮೂಹವನ್ನು ಸಬಲರನ್ನಾಗಿಸುವುದೇ ನಮ್ಮ ಗುರಿ: ಶರಣಪ್ರಕಾಶ್ ಪಾಟೀಲ್