ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಕೊರೊನಾ ಚಿಕಿತ್ಸೆ: ಶರಣಪ್ರಕಾಶ್ ಪಾಟೀಲ್

Public TV
2 Min Read
SharanPrakash Patil

ಬೆಂಗಳೂರು: ಕೊರೊನಾ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನ ಸಜ್ಜುಗೊಳಿಸಲಾಗಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ (SharanPrakash Patil) ತಿಳಿಸಿದರು.

ಕೋವಿಡ್ (Covid) ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನ ಬರುವ ಎಲ್ಲಾ ಸರ್ಕಾರಿ ಮೆಡಿಕಲ್ ಕಾಲೇಜುಗಳ ನಿರ್ದೇಶಕರ ಜೊತೆ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಕರ್ನಾಟಕ ಮತ್ತು ಬೆಂಗಳೂರಿನಲ್ಲಿ (Bengaluru) ಕೋವಿಡ್ ಕೇಸ್ ಜಾಸ್ತಿ ಆಗ್ತಿದೆ. ಇದಕ್ಕೆ ಮುನ್ನೆಚ್ಚರಿಕಾ ಕ್ರಮಕ್ಕಾಗಿ ಇಂದು ಸಭೆ ಆಗಿದೆ. ನಮಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಕೊಟ್ಟಿದೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ : ಪರಮೇಶ್ವರ್‌ ಅಧಿಕೃತ ಘೋಷಣೆ

ಗರ್ಭಿಣಿಯರು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇರೋರು ಮಾಸ್ಕ್ ಹಾಕಬೇಕು. ಶಾಲೆಗಳು ಪ್ರಾರಂಭ ಆಗ್ತಿದೆ. ಆರೋಗ್ಯ ಸಮಸ್ಯೆ ಇರೋರು ಶಾಲೆಗೆ ಬರಬಾರದು ಅಂತ ಹೇಳಿದ್ದಾರೆ. ಸಾರಿ ಕೇಸ್ ಟೆಸ್ಟ್ ಮಾಡೋಕೆ ಹೇಳಿದ್ದಾರೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಹೆಚ್ಚಳ, ಸದ್ಯಕ್ಕೆ ಮಾಸ್ಕ್ ಕಡ್ಡಾಯ ಇಲ್ಲ: ಸಿದ್ದರಾಮಯ್ಯ

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಆಸ್ಪತ್ರೆಗಳ ಸಭೆ ಮಾಡಿದ್ದೇನೆ. ಕೂಡಲೇ ಟೆಸ್ಟ್ ವ್ಯವಸ್ಥೆ ಸಿದ್ದ ಮಾಡಿಕೊಳ್ಳಬೇಕು. ಆರ್‌ಟಿಪಿಸಿಆರ್ ಕಿಟ್ ಸೇರಿ ಎಲ್ಲಾ ರೆಡಿ ಮಾಡಿಕೊಳ್ಳಬೇಕು. ಆಸ್ಪತ್ರೆಗೆ ಬರುವ ಸಿಬ್ಬಂದಿಗಳು, ವೈದ್ಯರು ಮಾಸ್ಕ್ ಹಾಕಬೇಕು. ಸಾರಿ ಕೇಸ್ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಬೆಡ್‌ಗಳು, ಆಕ್ಸಿಜನ್ ಬಗ್ಗೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ವೆಂಟಿಲೇಟರ್, ಔಷಧಿ ಎಲ್ಲಾ ಸಿದ್ಧ ಮಾಡಿಕೊಳ್ಳಲು ಸೂಚನೆ ಕೊಡಲಾಗಿದೆ. ಏನಾದ್ರು ಕೊರತೆ ಇದ್ದರೆ ಕೂಡಲೇ ಮಾಹಿತಿ ನೀಡಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಇರಬೇಕು. ವೆಂಟಿಲೇಟರ್ ಇದೆಯಾ, ಇಲ್ವಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡುವುದಿಲ್ಲ. ಸಾರಿ ಕೇಸ್, ಆರೋಗ್ಯ ಸಮಸ್ಯೆ ಇರೋರು, ಗರ್ಭಿಣಿಯರು, ವಯಸ್ಸಾದವರು ಮಾಸ್ಕ್ ಹಾಕಬೇಕು. ಬೇರೆಯವರಿಗೆ ಮಾಸ್ಕ್ ಸದ್ಯಕ್ಕೆ ಕಡ್ಡಾಯವಿಲ್ಲ. ನಮ್ಮ ಆಸ್ಪತ್ರೆಗಳಿಗೆ ಜನರು ಜಾಸ್ತಿ ಬರ್ತಾರೆ ಹೀಗಾಗಿ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಅಂತ ಹೇಳಿದ್ದೇವೆ. ಎಲ್ಲಾ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಕೊಡಬೇಕು ಎಂದಿದ್ದೇವೆ. ಪ್ರತ್ಯೇಕ ಕೊಠಡಿ ಅವಶ್ಯಕತೆ ಇದ್ದರೆ ಮಾಡಿಕೊಳ್ಳಲು ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಔಷಧಿ, ಆಕ್ಸಿಜನ್, ಬೆಡ್ ಎಲ್ಲವೂ ನಮ್ಮ ಬಳಿ ಸಿದ್ಧ ಇದೆ. ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇದು ನಿಮ್ಮ ಫೆಮಿನಿಸಂ?- ದೀಪಿಕಾ ಪಡುಕೋಣೆ ವಿರುದ್ಧ ಸಂದೀಪ್ ರೆಡ್ಡಿ ಆಕ್ರೋಶ

ಬೆಂಗಳೂರಿನಲ್ಲಿ ಕೊರೊನಾ (Corona) ಕೇಸ್ ಜಾಸ್ತಿ ಆಗ್ತಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಡಲಾಗಿದೆ. ಬೆಂಗಳೂರು ಜನ ಆತಂಕ ಪಡೋದು ಬೇಡ. ಲಸಿಕೆ ಬಗ್ಗೆ ಚರ್ಚೆ ಆಗಿದೆ. ಕೇಂದ್ರದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಅವಶ್ಯಕತೆ ಇದ್ದರೆ, ಲಸಿಕೆ ತೆಗೆದುಕೊಳ್ಳೋಕೆ ಕೇಂದ್ರದ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ಮಾಹಿತಿ ನೀಡಿದರು.

Share This Article