ಡಿವೈಡರ್‌ಗೆ ಲಾರಿ ಡಿಕ್ಕಿ – ಚೆಲ್ಲಾಪಿಲ್ಲಿಯಾದ ಔಷಧ ಬಾಕ್ಸ್‌ಗಳು

Public TV
1 Min Read
Lorry Accident Koppal

ಕೊಪ್ಪಳ: ನಿದ್ದೆ ಮಂಪರಿನಲ್ಲಿ ಚಾಲಕ ಡಿವೈಡರ್‌ಗೆ ಗುದ್ದಿದ ಪರಿಣಾಮ ಲಾರಿ ಪಲ್ಟಿಯಾಗಿ ಲಕ್ಷಾಂತರ ಮೌಲ್ಯದ ಔಷಧಿ ಮಣ್ಣುಪಾಲಾಗಿರುವ ಘಟನೆ ಯಲಬುರ್ಗಾ (Yalaburga) ತಾಲೂಕಿನ ಮಾಟಲದಿನ್ನಿ ಗ್ರಾಮದ ಬಳಿಯಿರುವ 50ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಇದನ್ನೂ ಓದಿ: ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿಯಾಗಿರುವ ಘಟನೆ ತಲೆತಗ್ಗಿಸುವಂಥದ್ದು: ಪರಮೇಶ್ವರ್

ಔಷಧಿ ತುಂಬಿದ ಲಾರಿ ಗುಜರಾತ್‌ನ ಅಹಮಾಬಾದ್‌ನಿಂದ ಬೆಂಗಳೂರಿಗೆ ಹೊರಟಿತ್ತು. ಈ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿ ಲಾರಿ ಚಲಾಯಿಸುತ್ತಿದ್ದು, ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಲಾರಿ ಪಲ್ಟಿಯಾಗಿದ್ದು, ಔಷಧ ತುಂಬಿದ್ದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿದೆ. ಲಕ್ಷಾಂತರ ಮೌಲ್ಯದ ಔಷಧ ಮಣ್ಣುಪಾಲಾಗಿದೆ.

Koppal Lorry Accident

ಅಪಘಾತದಲ್ಲಿ ಚಾಲಕರಾದ ಮೊಹಮ್ಮದ್ ಜಾಕಿರ್ ಹುಸೇನ್ ಹಾಗೂ ಮೊಹಮ್ಮದ್ ಪಾಷಾ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಫಸ್ಟ್‌ ಟೈಮ್‌ ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ ಬ್ಯಾನ್‌

Share This Article