ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2025) ದಕ್ಷಿಣದ ನಟನ ಬಗ್ಗೆ ನೀಡಿರುವ ಹೇಳಿಕೆವೊಂದು ವೈರಲ್ ಆಗಿದೆ. ಫಹಾದ್ ಫಾಸಿಲ್ ಅದ್ಭುತ ನಟ ಎಂದು ಕಾನ್ ಚಲನಚಿತ್ರೋತ್ಸವದ ಸಂದರ್ಶನವೊಂದರಲ್ಲಿ ನಟಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಜೊತೆ ಅಮೂಲ್ಯ ಕ್ಯೂಟ್ ಫೋಟೋಶೂಟ್
ಈ ಕಾರ್ಯಕ್ರಮದಲ್ಲಿ ಕೆರಿಯರ್, ಫ್ಯಾಮಿಲಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಆಲಿಯಾಗೆ ಕೇಳಲಾಗಿದೆ. ಆಗ ನೆಚ್ಚಿನ ನಟ ಯಾರು ಎಂದು ಎದುರಾದ ಪ್ರಶ್ನೆಗೆ ಥಟ್ ಅಂತ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಹೆಸರನ್ನು ನಟಿ ಹೇಳಿದ್ದಾರೆ. ನನಗೆ ಫಹಾದ್ ಅವರ ಆ್ಯಕ್ಟಿಂಗ್ ಇಷ್ಟ. ಅವರು ನಟಿಸಿರುವ ‘ಆವೇಶಂ’ ಚಿತ್ರ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದು. ಅವರು ಅದ್ಭುತ ನಟ, ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್
ಅದಷ್ಟೇ ಅಲ್ಲ, ಮಲಯಾಳಂ ಸಿನಿಮಾಗಳ ಬಗ್ಗೆ ಆಲಿಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ‘ಡಾರ್ಲಿಂಗ್ಸ್’ ಎಂಬ ಸಿನಿಮಾದಲ್ಲಿ ಮಲಯಾಳಂ ನಟ ರೋಷನ್ ಮ್ಯಾಥ್ಯು ಅವರೊಂದಿಗೆ ನಟಿಸಿದ್ದೆ. ಅವರು ಅದ್ಭುತ ಪ್ರತಿಭೆ ಎಂದಿದ್ದಾರೆ. ನಟಿಯ ಮಾತು ಮಲಯಾಳಂ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.
View this post on Instagram
ಯಶ್ ರಾಜ್ ಫಿಲ್ಮ್ ನಿರ್ಮಾಣದ ‘ಆಲ್ಪಾ’ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ & ವಾರ್’ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ.