ಬಹುಭಾಷಾ ನಟನಾಗಿ ಗುರುತಿಸಿಕೊಳ್ಳುತ್ತಿರುವ ಕನ್ನಡದ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಈಗ ನಿರ್ಮಾಣಕ್ಕಿಳಿದಿದ್ದಾರೆ. ಅವರ ಚೊಚ್ಚಲ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಭಿಮಾನಿಗಳಿಂದ ಈ ಟೀಸರ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಧ್ರುವ ಸರ್ಜಾಗೆ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್
ಮೊದಲ ಸಿನಿಮಾದಲ್ಲೇ ಹಾರರ್ ಕಥೆ ಹೇಳಲು ಹೊರಟಿದ್ದಾರೆ. ‘ಧೀ ಸಿನಿಮಾಸ್’ ನಿರ್ಮಾಣ ಸಂಸ್ಥೆ ಮೂಲಕ ದೀಕ್ಷಿತ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ‘ವಿಡಿಯೋ’ ಚಿತ್ರದ ಟೀಸರ್‌ನಲ್ಲಿ ಹಾರರ್ ಕಥೆಯ ಸಣ್ಣ ಝಲಕ್ ಅನ್ನು ತೋರಿಸಲಾಗಿದೆ. ‘ವಿಡಿಯೋ’ (Video) ಎಂಬ ಭಿನ್ನ ಟೈಟಲ್ ಇಡಲಾಗಿದ್ದು, ಇದರ ಟೀಸರ್ ನೋಡಿ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಇದನ್ನೂ ಓದಿ:ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ
View this post on Instagram
‘ಬ್ಲಿಂಕ್’ ಚಿತ್ರದ (Blink) ಯಶಸ್ಸಿನ ಬಳಿಕ ನಿರ್ದೇಶಕ ಶ್ರೀನಿಧಿ ಬೆಂಗಳೂರು ಜೊತೆ ದೀಕ್ಷಿತ್ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಭರತ್, ಜೀವನ್, ಪ್ರಿಯಾ ಜೆ ಆಚಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.
View this post on Instagram
ತೆಲಗಿನಲ್ಲಿ ನಾನಿ, ಕೀರ್ತಿ ಸುರೇಶ್ ಜೊತೆ ‘ದಸರಾ’ ಸಿನಿಮಾದಲ್ಲಿ ನಟಿಸಿದ್ಮೇಲೆ ದೀಕ್ಷಿತ್‌ಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡದ ಸಿನಿಮಾಗಳ ಜೊತೆ ರಶ್ಮಿಕಾ ಮಂದಣ್ಣ ಜೊತೆ ‘ದಿ ಗರ್ಲ್‌ಫ್ರೆಂಡ್’ ಚಿತ್ರ, ಶವರಾ ಚಿತ್ರ, ಮಲಯಾಳಂ ‘ಏಂಜಲ್ ನಂ 16’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.