ಮಂಡ್ಯ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೆಆರ್‌ಎಸ್ ಡ್ಯಾಮ್‌ಗೆ (KRS Dam) ಬರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಭಾನುವಾರದವರೆಗೂ ಕೇವಲ 150 ಕ್ಯುಸೆಕ್ ಒಳಹರಿವಿತ್ತು. ಇಂದು (ಸೋಮವಾರ) ಮಳೆಯ (Rain) ಪರಿಣಾಮ 2053 ಕ್ಯುಸೆಕ್ ಒಳಹರಿವು ಇದೆ.
ಜಲಾಶಯದ ನೀರಿನ ಮಟ್ಟ 89 ಅಡಿಗೆ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿತ್ತು. ಈಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುಳಿಯದ ಮಳೆ – ಕೆಆರ್‌ಎಸ್ ನೀರಿನ ಮಟ್ಟ 89 ಅಡಿಗೆ ಕುಸಿತ
ಮುಂಗಾರು ತಡವಾಗಿದ್ರೆ ಕುಡಿಯುವ ನೀರಿಗೆ ಕಂಟಕ ಎದುರಾಗುವ ಆತಂಕ ಇತ್ತು. ಡ್ಯಾಮ್‌ನಲ್ಲಿ ಈಗ 15.555 ಟಿಎಂಸಿ ನೀರಿದ್ದು, 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಉಳಿದ 8 ಟಿಎಂಸಿಯಲ್ಲಿ ಬೆಳೆಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸಬೇಕಾಗಿತ್ತು. ಇದೀಗ ಮಳೆಯಾಗುತ್ತಿದ್ದು ಆತಂಕ ದೂರವಾಗಿದೆ. ಇದನ್ನೂ ಓದಿ: ಧಾರಾಕಾರ ಮಳೆ – ಹೇಮಾವತಿ ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ
ಇಂದಿನ ಕೆಆರ್‌ಎಸ್ ಡ್ಯಾಮ್ ನೀರಿನ ಮಟ್ಟ
ಜಲಾಶಯ ಗರಿಷ್ಠ ಮಟ್ಟ 124.80 ಅಡಿ.
49.452 ಟಿಎಂಸಿ ಸಾಮರ್ಥ್ಯ.
ಇಂದಿನ ಜಲಾಶಯದ ನೀರಿನ ಮಟ್ಟ 89.35 ಅಡಿ, 15.555 ಟಿಎಂಸಿ.
ಇಂದಿನ ಒಳ ಹರಿವು 2053 ಕ್ಯುಸೆಕ್