ಇಸ್ಲಾಮಾಬಾದ್: ಸದಾ ಸುಳ್ಳು ಹೇಳುವ ಮೂಲಕ ಜಗತ್ತಿನ ಮುಂದೆ ಬೆತ್ತಲಾಗುವ ಪಾಕಿಸ್ತಾನ (Pakistan) ಈಗ ಮತ್ತೆ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.
ಭಾರತದ ಜೊತೆ ಕರೆ ಮಾಡಿ ಕದನ ವಿರಾಮ ಘೋಷಣೆ ಮಾಡುವಂತೆ ಬೇಡಿಕೊಂಡ ಬಳಿಕ ಪಾಕಿಸ್ತಾನ ಈಗ ಸಮರವನ್ನು ಗೆದ್ದಂತೆ ಪೋಸ್ ನೀಡಿ ಸಂಭ್ರಮಿಸುತ್ತಿದೆ. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಾಕ್ ಪ್ರಧಾನಿ ಶಹಬಾಜ್ ಷರೀಫ್ (Shehbaz Sharif), ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ (Asim Munir) ನೀಡಿದ ಗಿಫ್ಟ್ ಫೋಟೋ ಈಗ ಸಾಮಾಜಿಕ ದೊಡ್ಡ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ
Pakistan’s PM Shehbaz Sharif gifted a grand portrait to Army Chief Asim Munir turns out, the photo was taken from China’s PLA website
Yes, the image shows Chinese soldiers, not Pakistani ones.
But no surprise,Pakistan only gifts pictures of their real father🤣 pic.twitter.com/2dPwsJq6yz
— Ravi Ranjan🇮🇳 (@RaviRanjanIn) May 25, 2025
ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಅಸಿಮ್ ಮುನೀರ್ ಪಾಕಿಸ್ತಾನದ ರಾಜಕಾರಣಿಗಳಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ಈ ವೇಳೆ ಶಹಬಾಜ್ ಷರೀಫ್ ದೀರ್ಘ ವ್ಯಾಪ್ತಿಯ ರಾಕೆಟ್ ಲಾಂಚರ್‌ನಿಂದ ಕ್ಷಿಪಣಿ ಚಿಮ್ಮುತ್ತಿರುವ ಫೋಟೋವನ್ನು ಗಿಫ್ಟ್ ನೀಡಿದ್ದರು. ಇದನ್ನೂ ಓದಿ: ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್
ಶಹಬಾಜ್ ಷರೀಫ್ ಗಿಫ್ಟ್ ನೀಡುತ್ತಿರುವ ಫೋಟೋವನ್ನು ಪಾಕಿಸ್ತಾನ ISPR ಹಂಚಿಕೊಂಡಿತ್ತು. ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಈ ಫೋಟೋದ ಸತ್ಯಾಸತ್ಯತೆ ಪರಿಶೀಲನೆ ಇಳಿದಾಗ ಚೀನಾ (China) ಸೇನೆಯ ಫೋಟೋ ಎನ್ನುವುದು ದೃಢಪಟ್ಟಿದೆ. 2017 ರಲ್ಲಿ ಚೀನಾ ಪರೀಕ್ಷೆ ಮಾಡಿದ್ದ ಫೋಟೋವನ್ನು ಎಡಿಟ್ ಮಾಡಿ ಗಿಫ್ಟ್ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನೆಟ್ಟಿಗರು ಪಾಕಿಸ್ತಾನವನ್ನು ಫುಲ್ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ವಿಜಯೋತ್ಸವ ಆಚರಿಸಲು ಪಾಕಿಸ್ತಾನಕ್ಕೆ ಯಾವುದೇ ಫೋಟೋ ಸಿಕ್ಕಿಲ್ಲ. ಈ ಕಾರಣಕ್ಕೆ ಚೀನಾ ಸೇನೆಯ ಫೋಟೋವನ್ನು ಎಡಿಟ್ ಮಾಡಿ ಗಿಫ್ಟ್ ನೀಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಫೋಟೋ ವೈರಲ್ ಆಗಿದೆ.