ಕುಡಿದ ಮತ್ತಲ್ಲಿ ಒನ್‌ವೇಗೆ ನುಗ್ಗಿದ ಕಾರಿನ ಚಾಲಕ – ಬ್ಯಾರಿಕೇಡ್‌ಗೆ ಗುದ್ದಿ ಪೊಲೀಸರಿಗೆ ಗಾಯ

Public TV
1 Min Read
Koramangala Drink and Drive

– ವಿಂಡೋ ಓಪನ್ ಮಾಡದೇ ಪುಂಡಾಟ, ಗಾಜು ಒಡೆದು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಕುಡಿದ ಮತ್ತಲ್ಲಿ ಚಾಲಕ ಕಾರನ್ನು ಒನ್‌ವೇಗೆ ನುಗ್ಗಿಸಿದ ಪರಿಣಾಮ ಎದುರಿಗಿದ್ದ ಬ್ಯಾರಿಕೇಡ್‌ಗೆ ಗುದ್ದಿ, ಪೊಲೀಸ್ ಕಾಲಿಗೆ ಗಾಯ ಮಾಡಿರುವ ಘಟನೆ ಕೋರಮಂಗಲದ (Koramangala) ಜ್ಯೋತಿ ನಿವಾಸ ಕಾಲೇಜು ಬಳಿ ನಡೆದಿದೆ.

ಕಾರು ಚಾಲಕನನ್ನು ನಂದಾಕೃಷ್ಣ ಎಂದು ಗುರುತಿಸಲಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ.ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಭಾರೀ ಮಳೆ – ಗುಡ್ಡ ಕುಸಿತ, ರಸ್ತೆಗುರುಳಿದ ಬೃಹತ್ ಬಂಡೆ

ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಚಾಲಕ ಕಾರನ್ನು ಓನ್‌ವೇನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ. ಆತನನ್ನು ಕಂಡ ಪೊಲೀಸರು ಅಡ್ಡ ಹಾಕಿದ್ದು, ಈ ವೇಳೆ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾನೆ. ಪರಿಣಾಮ ಮುಂದೆ ಹೋಗಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ಸಿಬ್ಬಂದಿ ಕಾಲಿಗೆ ಗಾಯವಾಗಿದೆ. ಅಲ್ಲದೇ ಎದುರಿಗೆ ನಿಂತಿದ್ದ ಕಾರಿಗೂ ಡ್ಯಾಮೇಜ್ ಆಗಿದೆ.

ಇಷ್ಟೆಲ್ಲಾ ಆದರೂ ಕಾರಿನಿಂದ ಕೆಳಗಿಳಿಯದೇ, ವಿಂಡೋ ಓಪನ್ ಮಾಡದೇ ಪುಂಡಾಟ ಮಾಡಿದ್ದಾನೆ. ಕೊನೆಗೆ ಕಾರಿನ ಗಾಜು ಒಡೆದು ಚಾಲಕನನ್ನು ಕೋರಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಧಾರಾಕಾರ ಮಳೆ – ಹೇಮಾವತಿ ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ

 

Share This Article