ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

Public TV
1 Min Read
Shiekh Hasina

ಢಾಕಾ: ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ (Muhammad Yunus) ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಅಂತ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಇದು ಸಂವಿಧಾನ ಬಾಹಿರ ಎಂದು ಹೇಳಿದ್ದಾರೆ.

Sheikh Hasina 1

ಮುಂದುವರಿದು… ಸರ್ಕಾರದ ಮುಖ್ಯಸ್ಥ ಯೂನಸ್‌ ಉಗ್ರಗಾಮಿ ಗುಂಪುಗಳ ಸಹಾಯದಿಂದ ಬಾಂಗ್ಲಾದೇಶ ಸರ್ಕಾರವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಅಂದು ಭಯೋತ್ಪಾದಕರ ನಿಯಂತ್ರಣಕ್ಕೆ ಹೋರಾಡಿತ್ತು. ಆದರಿಂದು ಭಯೋತ್ಪಾದಕರಿಗೆ ಸರ್ಕಾರದ ನಿಯಂತ್ರಣವನ್ನ ಯೂನಸ್‌ ಆಡಳಿತ ನೀಡಿದೆ. ಈ ಹಿಂದೆ ನನ್ನ ತಂದೆ ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕದ ಡಿಮ್ಯಾಂಡ್‌ಗಳನ್ನ ಒಪ್ಪಿರಲಿಲ್ಲ. ಅದಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟರು ಹೊರತು ಅಧಿಕಾರಕ್ಕಾಗಿ ದೇಶವನ್ನು ಮಾರುವ ಬಗ್ಗೆ ಯೋಚಿಸಿರಲಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

muhammad yusuf chief adviser of bangla desh

ಇದೇ ವೇಳೆ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ತಮ್ಮ ತಂದೆಯವರೊಂದಿಗೆ ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸಿದ ಕ್ಷಣಗಳನ್ನು ಹಸೀನಾ ನೆನಪಿಸಿಕೊಂಡರು. ಆ ದೇಶದ ಒಂದಿಂಚು ಮಣ್ಣನ್ನೂ ಬಿಟ್ಟುಕೊಡುವ ಉದ್ದೇಶ ಯಾರೊಬ್ಬರಿಗೂ ಇರಲಿಲ್ಲ. ಆದರೆ ಇಂದಿನ ಸ್ಥಿತಿ ನಿಜಕ್ಕೂ ದುರದೃಷ್ಟಕರ, ದೇಶವನ್ನೇ ಮಾರಾಟ ಮಾಡುವ ವ್ಯಕ್ತಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

ಅಂದು ನಮ್ಮ ಸರ್ಕಾರ ಬಾಂಗ್ಲಾದೇಶದ ಜನರ ರಕ್ಷಣೆಗೆ ನಿಂತಿತ್ತು. ಒಂದೇ ಒಂದು ಉಗ್ರರ ದಾಳಿಯ ನಂತರ ಕಠಿಣ ಕ್ರಮ ತೆಗೆದುಕೊಂಡಿದ್ದೆವು. ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದೆವು. ಆದರಿಂದು ದೇಶದ ಜೈಲುಗಳು ಖಾಲಿಯಾಗಿವೆ. ಬಂಧನದಲ್ಲಿದ್ದ ಉಗ್ರರನ್ನ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಬಾಂಗ್ಲಾ ಸರ್ಕಾರದಲ್ಲಿ ಈಗ ಉಗ್ರರ ಆಳ್ವಿಕೆ ಶುರುವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Share This Article