ಪಾಟ್ನಾ: ಮಹತ್ವದ ಬೆಳವಣಿಗೆಯೊಂದರಲ್ಲಿ ʻನೈತಿಕ ಮೌಲ್ಯಗಳ ಕೊರತೆʼ ಆರೋಪದ ಮೇಲೆ, ರಾಷ್ಟ್ರೀಯ ಜನತಾ ದಳ (RJD)ದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರು, ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರನ್ನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ ಅಲ್ಲದೇ ಕುಟುಂಬದಿಂದಲೂ ಹೊರಹಾಕಿದ್ದಾರೆ.
#WATCH | Patna | RJD chief Lalu Prasad Yadav expels his elder son, Tej Pratap Yadav from the party for 6 years, he also removed him from the family.
RJD leader Tejashwi Yadav says, “We cannot tolerate such things, we are working and are dedicated to the people of Bihar. If it’s… pic.twitter.com/gSJ5ubyIyz
— ANI (@ANI) May 25, 2025
ಈ ಕುರಿತು ಲಾಲು ಪ್ರಸಾದ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ತೇಜ್ ಪ್ರತಾಪ್ ಅವರ ಸಹೋದರ ತೇಜಸ್ವಿ ಯಾದವ್, ಪಕ್ಷ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನ ನಮ್ಮ ತಂದೆಯವರು ರವಾನಿಸಿದ್ದಾರೆ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ರೀ ಎಂಟ್ರಿ – ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್
निजी जीवन में नैतिक मूल्यों की अवहेलना करना हमारे सामाजिक न्याय के लिए सामूहिक संघर्ष को कमज़ोर करता है। ज्येष्ठ पुत्र की गतिविधि, लोक आचरण तथा गैर जिम्मेदाराना व्यवहार हमारे पारिवारिक मूल्यों और संस्कारों के अनुरूप नहीं है। अतएव उपरोक्त परिस्थितियों के चलते उसे पार्टी और परिवार…
— Lalu Prasad Yadav (@laluprasadrjd) May 25, 2025
ಮುಂದುವರೆದು, ರಾಷ್ಟ್ರೀಯ ಜನತಾದಳ ಪಕ್ಷ ಬಿಹಾರದ ಜನರಿಗೆ ಸಮರ್ಪಿತವಾಗಿದೆ. ನನ್ನ ಅಣ್ಣನ ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನವು ವಿಭಿನ್ನವಾಗಿದೆ. ಅವರು ತಮ್ಮ ವೈಯಕ್ತಿಕ ನಿರ್ಧಾರಗಳನ್ನ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರು ವಯಸ್ಕರಾಗಿದ್ದು, ನಿರ್ಧಾರಗಳನ್ನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಅಂತ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ. ಇದನ್ನೂ ಓದಿ: ಟೆಸ್ಟ್ ನಿವೃತ್ತಿ ಬಳಿಕ ಟೆಂಪಲ್ ರನ್; ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ವಿರುಷ್ಕಾ ದಂಪತಿ ಭೇಟಿ
ಅಲ್ಲದೇ ತೇಜ್ ಪ್ರತಾಪ್ ಯಾದವ್‌ರನ್ನ ಕುಟುಂಬದಿಂದಲೂ ಹೊರಹಾಕಲಾಗಿದೆ. ಅಣ್ಣ ತಮ್ಮ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಕುಟುಂಬದಲ್ಲಿ ಯಾರನ್ನೂ ತಮ್ಮವರೆಂದು ಪರಿಗಣಿಸುವುದಿಲ್ಲ. ಹೀಗಾಗಿ ಸಹೋದರನನ್ನು ಕುಟುಂಬದಿಂದಲೂ ಹೊರಹಾಕುವ ನಿರ್ಧಾರವನ್ನ ನಮ್ಮ ತಂದೆ ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ತಮನ್ನಾ ಬದಲು ನಮ್ಮ ನಟಿಯರನ್ನೇ ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಯಭಾರಿ ಮಾಡಬಹುದಿತ್ತು: ಜಮೀರ್
ಇನ್ನೂ ಸಾಮಾಜಿಕ ಜಾಲತಾಣದಲ್ಲಿನ 1 ಪೋಸ್ಟ್‌ನಿಂದ ಉಂಟಾದ ಗದ್ದಲ, ತೇಜ್ ಪ್ರತಾಪ್ ಅವರ ಉಚ್ಚಾಟನೆಗೆ ಕಾರಣ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ತೇಜ್ ಪ್ರತಾಪ್ ಒಂದು ದಿನದ ಹಿಂದೆಯಷ್ಟೇ 12 ವರ್ಷಗಳ ಪ್ರೀತಿ ಬಹಿರಂಗಪಡಿಸಿದ್ದರು. ಈ ಬೆನ್ನಲ್ಲೇ ಅವರನ್ನ ಪಕ್ಷದಿಂದ ಉಚ್ಚಾಟಿಸಲಾಗಿದೆ.