ಕಾರವಾರ: ಮೀನು ಹಿಡಿಯಲು ಹೋಗಿ ಕಾಳಿ ನದಿಯಲ್ಲಿ(Kali River) ಕಾಲುಜಾರಿ ನದಿಗೆ ಬಿದ್ದ ಯುವಕ ನಾಪತ್ತೆಯಾದ ಘಟನೆ ಕಾರವಾರ(Karwar) ತಾಲೂಕಿನ ಸುಂಕೇರಿ ಬಳಿ ನಡೆದಿದೆ.
ಕಡವಾಡ(Kadavada) ಗ್ರಾಮದ ಮಾಡಿಭಾಗದ ಸಂತೋಷ್ ರಾಯ್ಕರ್ (35) ಕಾಳಿ ನದಿಯಲ್ಲಿ ನಾಪತ್ತೆಯಾದ ಯುವಕ. ಇದನ್ನೂ ಓದಿ: ಸಕಲೇಶಪುರ | ಭಾರೀ ಗಾಳಿ ಮಳೆಗೆ ಹೋಟೆಲ್ ಗೋಡೆ ಕುಸಿತ – ನಾಲ್ವರಿಗೆ ಗಾಯ
ಶನಿವಾರ ರಾತ್ರಿ ಸುಂಕೇರಿ(Sunkeri) ಸೇತುವೆ ಬಳಿ ಮೀನು ಹಿಡಿಯಲು ಹೋಗಿ ಕಾಲುಜಾರಿ ಬಿದ್ದಿದ್ದ ಸಂತೋಷ್ ಕೊಚ್ಚಿಹೋಗಿದ್ದಾನೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ನದಿ ಹಿನ್ನೀರಿನಲ್ಲಿ ಸಂತೋಷ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೊರೊನಾ ರೀ ಎಂಟ್ರಿ – ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್