ಲಕ್ನೋ: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli), ಪತ್ನಿ ಅನುಷ್ಕಾ ಶರ್ಮಾ ಟೆಂಪಲ್ ರನ್ ಶುರು ಮಾಡಿದ್ದಾರೆ. ಇತ್ತೀಚೆಗೆ ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ್ ಅವರನ್ನ ಭೇಟಿಯಾಗಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇಂದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
#WATCH | Uttar Pradesh: Indian Cricketer Virat Kohli, along with his wife and actor Anushka Sharma, visited and offered prayers at Hanuman Garhi temple in Ayodhya. pic.twitter.com/pJAGntObsE
— ANI (@ANI) May 25, 2025
ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ (Hanuman Garhi Temple) ಭೇಟಿ ನೀಡಿದ್ದಾರೆ. ಇದು ವಿರುಷ್ಕಾ ದಂಪತಿ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಇದನ್ನೂ ಓದಿ: ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲೋವರೆಗೂ ನಾನು ಮದುವೆಯಾಗಲ್ಲ: ಫಲಕ ಪ್ರದರ್ಶಿಸಿದ ಅಭಿಮಾನಿ
ಇಂದು ಅಯೋಧ್ಯೆಯ (Ayodhya) ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಆಗಮಿಸಿ ವಿರಾಟ್ ಮತ್ತು ಅನುಷ್ಕಾ ಪ್ರಾರ್ಥಿಸಿದರು. ಈ ವೇಳೆ ಅರ್ಚಕರು ಕೊಹ್ಲಿ ದಂಪತಿಗೆ ದೇವರ ಹಾರ ಹಾಕಿದರು. ಜೊತೆಗೆ ಅನುಷ್ಕಾ ಶರ್ಮಾ ಹಣೆಗೆ ತಿಲಕ ಇಟ್ಟರು. ಸ್ಟಾರ್ ಜೋಡಿ ದೇವಸ್ಥಾನಕ್ಕೆ ಆಗಮಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ- ಗಿಲ್‌ಗೆ ನಾಯಕ ಪಟ್ಟ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೇವಾಲಯ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ದಾಸ್ ಜಿ ಮಹಾರಾಜ್ ಮಹಂತ್, ‘ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಆಧ್ಯಾತ್ಮಿಕತೆ, ಸಂಸ್ಕೃತಿ, ದೇವರು ಮತ್ತು ಸನಾತನ ಧರ್ಮದ ಬಗ್ಗೆ ಆಳವಾದ ಪ್ರೀತಿ ಇದೆ. ಅವರು ಭಗವಾನ್ ರಾಮಲಲ್ಲಾ ದೇಗುಲಕ್ಕೆ ಭೇಟಿ ನೀಡಿ ನಂತರ ಭಗವಾನ್ ಹನುಮಂತನಿಂದ ಆಶೀರ್ವಾದ ಪಡೆದರು. ಅವರು ಇಲ್ಲಿ ಆಧ್ಯಾತ್ಮಿಕತೆ ಮತ್ತು ಪೌರಾಣಿಕ ವಿಷಯಗಳನ್ನು ಸಹ ಚರ್ಚಿಸಿದರು ಎಂದು ತಿಳಿಸಿದ್ದಾರೆ.
2023ರ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೂ ಕೊಹ್ಲಿ ದಂಪತಿ ಆಗಮಿಸಿದ್ದರು. ಇದನ್ನೂ ಓದಿ: IPL 2025 | ಕೊನೆಯಲ್ಲಿ ʻಸನ್ʼ ಸ್ಟ್ರೋಕ್ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?