ಮಡೆನೂರು ಮನು ವಿವಾದದಲ್ಲಿ ಅಪ್ಪಣ ಹೆಸರು ತಳುಕು – ನಟ ಹೇಳಿದ್ದೇನು?

Public TV
2 Min Read
appanna

ಸಂತ್ರಸ್ತೆ ನಟಿ ಕಿರುಕುಳ ಆರೋಪ ಸುಳ್ಳು- ವೈರಲ್ ಆಡಿಯೋ ಬಗ್ಗೆ ಅಪ್ಪಣ್ಣ ಸ್ಪಷ್ಟನೆ

ಡೆನೂರು ಮನು (Madenoor Manu) ಅತ್ಯಾಚಾರ ಪ್ರಕರಣ ಭುಗಿಲೆದ್ದಿರೋ ಬೆನ್ನಲ್ಲೇ ನಟ ಅಪ್ಪಣ್ಣ ರಾಮದುರ್ಗ (Appanna Ramadurga) ವಿರುದ್ಧವು ಕೇಳಿಬಂದಿರೋ ಕಿರುಕುಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರೋ ಆಡಿಯೋ ನನ್ನದಲ್ಲ. ಕಿರುಕುಳ ಆರೋಪ ಸುಳ್ಳು ಎಂದು ಅಪ್ಪಣ್ಣ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆ ವಿಜಯಲಕ್ಷ್ಮಿ ಎತ್ತಿನಗಾಡಿ ಸವಾರಿ – ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್

Madenur Manu 2

‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಿಮ್ಮ ಮಾಧ್ಯಮಗಳಲ್ಲೇ ಆಡಿಯೋ ಬಂತು. ಅದನ್ನು ಸಂತ್ರಸ್ತೆ ಸುಳ್ಳು ಅಂತ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 2-3 ವರ್ಷದ ಹಳೆಯ ಆಡಿಯೋ. ಆ ಸಂತ್ರಸ್ತೆ, ಅಪ್ಪಣ್ಣ ಅವರದ್ದು ಯಾವುದೇ ಪಾತ್ರವಿಲ್ಲ. ನನ್ನ ಜೊತೆ ಶೋ ಮಾಡಬಾರದು ಅಂತ ಮನು ಒತ್ತಾಯಪೂರ್ವಕವಾಗಿ ಮಾಡಿಸಿರೋ ವಿಡಿಯೋ ಎಂದು ಮಾಧ್ಯಮಕ್ಕೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಅದೇ ನಿಜ, ನನ್ನಿಂದ ಆ ಹುಡುಗಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಬಳಿಕ ಬಿಗ್ ನ್ಯೂಸ್ ಕೊಟ್ರು ಮೋಕ್ಷಿತಾ ಪೈ!

madenur manu 1 1

ನಾನು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು ಎಂದು ಅವರ ಕೈಯಲ್ಲಿ ಕಿರುಕುಳ ನೀಡ್ತಿರೋದಾಗಿ ಮನು ಸುಳ್ಳು ಆಡಿಯೋ ಮಾಡಿಸಿದ್ದರ ಬಗ್ಗೆ ಆಕೆ ಹೇಳಿದ್ದಾರೆ. ಮನುಗೆ ಆಗಲಿ ಆ ಸಂತ್ರಸ್ತೆ ಹುಡುಗಿಗೆ ಆಗಿರಲಿ ನನ್ನ ಮೇಲೆ ವೈಯಕ್ತಿಕವಾಗಿ ಏನಿತ್ತೋ ನನಗೆ ಗೊತ್ತಿಲ್ಲ.

ಈ ವೇಳೆ, ನನಗೆ ಈ ರೀತಿ ಆಡಿಯೋ ಮಾಡಿಕೊಂಡಿರೋ ವಿಚಾರ ಮೊದಲೇ ಗೊತ್ತಿತ್ತು. ಎರಡು ವರ್ಷದ ಹಿಂದೆ ಸಂತ್ರಸ್ತೆ ಬಂದು ಆಡಿಯೋ ಬಗ್ಗೆ ಹೇಳಿದ್ದರು. ಆಗ ನಾನು ಹೀಗೆಲ್ಲಾ ಮಾಡಬಾರದು ಎಂದು ಬುದ್ಧಿ ಹೇಳಿ ಕಳುಹಿಸಿದ್ದೆ, ಕ್ಷಮೆ ಕೇಳಿ ಹೋಗಿದ್ದರು. ಈ ರೀತಿ ಆಡಿಯೋ ವೈರಲ್ ಆದಾಗ ನಮ್ಮ ಮನೆಯವರು ಸಹಜವಾಗಿ ಗಾಬರಿಯಾಗಿದ್ದರು. ಆಗ ನಾನೇ ಧೈರ್ಯ ಹೇಳಿದ್ದೇನೆ. ಮನು ಆರೋಪಿಸಿರುವ ಆ ಲೇಡಿ ಡಾನ್ ಯಾರು ಎಂದು ನನಗೆ ಗೊತ್ತಿಲ್ಲ. ಇದಕ್ಕೆ ಮನು ಅವರೇ ಕ್ಲ್ಯಾರಿಟಿ ನೀಡಬೇಕು ಎಂದಿದ್ದಾರೆ.

ವೈರಲ್ ಆಗಿರುವ ಆಡಿಯೋದಲ್ಲಿ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅಪ್ಪಣ್ಣ ರಾಮದುರ್ಗ ಅಂತ ಇದ್ದಾನೆ. ಅವರನು ‘ಕಾಮಿಡಿ ಕಿಲಾಡಿಗಳು’ ಸೀಸನ್ ಎರಡರಿಂದಲೂ ನನಗೆ ಸಿಕ್ಕಾಪಟ್ಟೆ ಟಾರ್ಚರ್ ಕೊಡ್ತಿದ್ದಾನೆ. ಶೋಗಳಿಗೆ ಕರೆದುಕೊಂಡು ಹೋಗಿ ಕೆಟ್ಟ ದೃಷ್ಟಿಯಲ್ಲಿ ನೋಡೋದು ಎಲ್ಲ ಮಾಡ್ತಿದ್ದ. ತುಂಬಾ ದಿನಗಳವರೆಗೆ ಅವುಗಳಿಂದ ನಾನು ತಪ್ಪಿಸಿಕೊಂಡು ಬರುತ್ತಿದ್ದೆ. ಇತ್ತೀಚೆಗೆ ಅವನ ಕಾಟ ಹೆಚ್ಚಾಗಿದ್ದು, ನನಗೆ ಅವನ ಕಿರುಕುಳ ತಪ್ಪಿಲ್ಲ ಎಂದು ಸಂತ್ರಸ್ತೆ ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.

Share This Article