ಸಾವಿರ ಕೋಟಿ ಲಾಭ ಮಾಡೋ ಉದ್ದೇಶವಿದೆ – ತಮನ್ನಾ ಆಯ್ಕೆಗೆ ಪ್ರಿಯಾಂಕ್‌ ಖರ್ಗೆ ಸಮರ್ಥನೆ

Public TV
2 Min Read
Tamannaah Bhatia Priyank Kharge 1

– ಛಲವಾದಿ ನಾರಾಯಣಸ್ವಾಮಿ ನನ್ನ ಮೇಲೆ ಅತ್ಯಾಚಾರ ಆಗಿದೆ ಅಂತಾ ಅಳ್ತಿದ್ದಾರೆ; ಲೇವಡಿ

ಬೆಂಗಳೂರು: ಮೈಸೂರು ಸ್ಯಾಂಡಲ್‌ ಸೋಪ್‌ (Mysore Sandal Soap) ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರ ಆಯ್ಕೆಯನ್ನ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಸಮರ್ಥಿಸಿಕೊಂಡಿದ್ದಾರೆ.

Tamannaah Bhatia 2

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು ಸ್ಯಾಂಡಲ್‌ ಸೋಪ್‌ಗೆ ತಮ್ಮನ್ನಾ (Tamannaah Bhatia) ಆಯ್ಕೆ ಕುರಿತು ಸಮರ್ಥನೆ ನೀಡಿದರು. ಮೈಸೂರು ಸ್ಯಾಂಡಲ್‌ ಸೋಪ್‌ ಕಾರ್ಖಾನೆಯಲ್ಲಿ ನಾವು 437 ಕೋಟಿ ಲಾಭ ಮಾಡಿದ್ದೇವೆ. ಅದನ್ನ ಸಾವಿರ ಕೋಟಿ ಮಾಡಬೇಕು. ಅದಕ್ಕೆ ಎಲ್ಲರ ಸಹಕಾರ ಮುಖ್ಯ. ನಮ್ಮ ಮಾರ್ಕೆಟಿಂಗ್‌ ಹೆಚ್ಚಾಗುತ್ತಲ್ಲ, ಹಾಕಿರುವ ಬಂಡವಾಳವೂ ಬರಬೇಕು, ಉದ್ಯೋಗ ಸೃಷ್ಟಿಯೂ ಆಗಬೇಕು. ಅಕ್ಕೆ ಯಾರಾದರೇನು? ಇನ್ವೆಸ್ಟ್ ಕರ್ನಾಟಕದಲ್ಲಿ 15.20 ಸಾವಿರ ಕೋಟಿ ರಾಜ್ಯಕ್ಕೆ ಬಂತಲ್ಲ, ಬಂಡವಾಳ ಹರಿದು ಬಂದಿದೆಯಲ್ಲ ಅಂತ ಸಮರ್ಥನೆ ನೀಡಿದರು. ಇದನ್ನೂ ಓದಿ: `ಪಬ್ಲಿಕ್ ಟಿವಿ’ಯ ಒಂದು ಕರೆಯಿಂದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಪ್ರಣವ್ ಫೌಂಡೇಶನ್..!

Priyank Kharge 2

ನನ್ನನ್ನ ನಾಯಿ ಅಂತ ಬೈಯ್ದು ಅವರು ಅಳುತ್ತಿದ್ದಾರೆ:
ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ನನ್ನನ್ನ ಕ್ಯಾಬಿನೆಟ್‌ನಿಂದ ಕೈ ಬಿಡಬೇಕು ಅಂತ ʻಪ್ರಿಯಾಂಕ್ ಖರ್ಗೆ ಹಠಾವೋʼ ಅಂತಿದ್ದಾರೆ. ಇದು ʻಪ್ರಿಯಾಂಕ್ ಖರ್ಗೆ ಹಠಾವ್ ನಾರಾಯಣಸ್ವಾಮಿ ಬಚಾವೋʼ ಪ್ರತಿಭಟನೆ. ಕಾಂಗ್ರೆಸ್‌ನವ್ರು ಮೋದಿಯವರಿಗೆ ಪ್ರಶ್ನೆ ಮಾಡಬಾರದು ಅಂತಾರೆ. ದೇಶದ ಆರ್ಥಿಕ ವಿಚಾರ ಬಂದಾಗಲೂ ಪ್ರಶ್ನೆ ಮಾಡಬಾರದು ಅಂತಾ ಪ್ರೆಸ್‌ಮೀಟ್‌ ಮಾಡ್ತಾರೆ. ಇಂದು ರಿಪಬ್ಲಿಕ್ ಆಫ್ ಕಲಬುರಗಿ ಅಂತಾ ಹೋಗಿದ್ದಾರೆ. ನಾರಾಯಣಸ್ವಾಮಿಯವ್ರು ಅಲ್ಲಿ ಹೋಗಿ ಅಳುತ್ತಾ ಇದ್ದಾರೆ. ನನ್ನ ಮೇಲೆ ಅತ್ಯಾಚಾರ ಆಗಿದೆ ಅಂತಾ ಅಳುತ್ತಿದ್ದಾರೆ, ಅವ್ರೇನೂ ಸಂತ್ರಸ್ತರಾ..? ನಾಯಿ ಅಂತ ಬೈದಿದ್ದು ನಂಗೆ ಅವ್ರು, ಸಂತ್ರಸ್ತರ ರೀತಿ ಅಳುತ್ತಿದ್ದಾರೆ. ಉಲ್ಟಾ ನನ್ನ ವಿರುದ್ಧವೇ ಪ್ರತಿಭಟನೆ ಮಾಡ್ತಿದ್ದಾರೆ. ಅಶೋಕ್, ವಿಜಯೇಂದ್ರ, ಸಿಟಿ ರವಿ, ಮಾಜಿ ಸಿಎಂಗಳು ಕಲಬುರಗಿಗೆ ಬಂದಿದ್ದಾರೆ. ಅಧಿಕಾರ ಇದ್ದಾಗ ಅಭಿವೃದ್ದಿಗೆ ಒಬ್ಬರೂ ಬರಲಿಲ್ಲ. ಆದ್ರೀಗ ನಾಲ್ಕು ಬಾರಿ ಕಲುಬುರಗಿಗೆ ಭೇಟಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರತಿ ರಾಜ್ಯದಲ್ಲಿ ಒಂದು ವಿಶ್ವದರ್ಜೆಯ ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ಮೋದಿ ಕರೆ

chalavadi narayanaswamy

ಅಕ್ಕಿ ಕಳ್ಳನಿಗೆ ಟಿಕೆಟ್‌ ಕೊಟ್ರಲ್ಲ ಏನಾಯ್ತು?
4 ಸಲ ಬಂದಾಗಲೂ ಪ್ರಿಯಾಂಕ್ ಖರ್ಗೆ ವಿರುದ್ಧವೇ ಪ್ರತಿಭಟನೆ ಮಾಡಲು ಬಂದಿದ್ದಾರೆ. ನೀವಿಲ್ಲಿ ರಾಜಕೀಯ ಮಾಡೋಕೆ ಬಂದಿದ್ರೆ ನಿಮಗೆ, ಮುಖಭಂಗಾನೆ, ಹಾಲಿನ ಪೌಡರ್ ಕದ್ದು ಶಿಕ್ಷೆ ಆದಂತಹ ವ್ಯಕ್ತಿ ಪರ ಬಂದಿದ್ರು. ಅವ್ರನ್ನ ಮರ್ಡರ್ ಮಾಡಲು ಪ್ರಯತ್ನ ಆಗಿದೆ ಅಂತಾ ಆರೋಪ ಮಾಡಿದ್ರು. ಆದ್ರೆ ಅವರವರೇ ಕುಡಿದು ಗಲಾಟೆ ಮಾಡಿಕೊಂಡಿದ್ರು ಅಂತಾ ವರದಿ ಬಂತು. ಲೋಕಲ್ ಲೀಡರ್ ಶಿಪ್ ನಂಬಿಕೊಂಡು ಬಂದರಲ್ಲಾ ಏನಾಯ್ತು..? ಅಕ್ಕಿ ಕಳ್ಳನಿಗೆ ಟಿಕೆಟ್ ಕೊಟ್ಟು ಅವನ ಪರವಾಗಿ ಬಂದ್ರಲ್ಲಾ ಏನಾಯ್ತು..? ಸ್ವಲ್ಪನಾದರು ಕಾಮನ್ ಸೆನ್ಸ್ ಯೂಸ್ ಮಾಡಿದ್ರೆ ಗೊತ್ತಾಗುತ್ತೆ ಅಲ್ವಾ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ಆಲಿಯಾ ಭಟ್‌ ಮತ್ತೆ ಪ್ರೆಗ್ನೆಂಟ್..? ವೈರಲ್‌ ಆಯ್ತು ವಿಡಿಯೋ..!

Share This Article