ಬೆಂಗಳೂರು: ಯುಜಿ ಸಿಇಟಿ 2025ರ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗಿದೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
3 ಲಕ್ಷದ 11 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡಲಾಗಿದೆ. ಬೀದರ್‌ನಲ್ಲಿ ವಿದ್ಯಾರ್ಥಿ ಜನಿವಾರ ಹಾಕಿದ್ದಕ್ಕೆ ಎಕ್ಸಾಂಗೆ ಕೂರಿಸದ ಪ್ರಕರಣದಲ್ಲಿ ವಿದ್ಯಾರ್ಥಿಗೆ ಉಳಿದ ವಿಷಯಗಳ ಅಂಕಗಳ ಆಧಾರದಲ್ಲಿ ಸರಾಸರಿ ಅಂಕಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಇನ್ನು ಭೌತಶಾಸ್ತ್ರದಲ್ಲಿ ಒಂದು ಗ್ರೇಸ್ ಅಂಕ ನೀಡಲಾಗಿದೆ. ರಸಾಯನ ಶಾಸ್ತ್ರದಲ್ಲಿ 2 ಪ್ರಶ್ನೆಗಳಿಗೆ ಎರಡು ಸರಿ ಉತ್ತರ ಮತ್ತು ಜೀವಶಾಸ್ತ್ರದಲ್ಲಿ 1 ಪ್ರಶ್ನೆಗೆ ಎರಡು ಸರಿ ಉತ್ತರ ಅಂತ ಪರಿಗಣನೆ ಮಾಡಲಾಗಿದೆ ಎಂದು ತಿಳಿಸಿದರು. ರ‍್ಯಾಂಕ್ ಪಡೆದವರ ವಿವರ ಹೀಗಿದೆ…ಇದನ್ನೂ ಓದಿ: CET: ನೋಂದಣಿ ಸಂಖ್ಯೆ ನಮೂದಿಸುವಲ್ಲಿ ದೋಷ – ಕೆಇಎ
ಸಿಇಟಿ ರ‍್ಯಾಂಕ್ ಡಿಟೇಲ್ಸ್:
ಒಟ್ಟು ಪರೀಕ್ಷೆಗೆ ಅರ್ಜಿ ಹಾಕಿದವರು- 3,30,787 ವಿದ್ಯಾರ್ಥಿಗಳು.
ಪರೀಕ್ಷೆ ಹಾಜರಾದವರು- 3,11,991 ವಿದ್ಯಾರ್ಥಿಗಳು.
ಸಿಇಟಿ ರ‍್ಯಾಂಕ್ ಪಡೆದವರು- 2,75,677 ವಿದ್ಯಾರ್ಥಿಗಳು.
ಎಂಜಿನಿಯರ್ ರ‍್ಯಾಂಕ್ ಪಡೆದವರು- 2,62,195 ವಿದ್ಯಾರ್ಥಿಗಳು
BNYS ರ‍್ಯಾಂಕ್ ಪಡೆದವರು- 1,98,679 ವಿದ್ಯಾರ್ಥಿಗಳು.
ಅಗ್ರಿಕಲ್ಚರ್ ರ‍್ಯಾಂಕ್ ಪಡೆದವರು- 2,14,588 ವಿದ್ಯಾರ್ಥಿಗಳು.
ವೆಟರ್ನರಿ ರ‍್ಯಾಂಕ್- 2,18,282 ವಿದ್ಯಾರ್ಥಿಗಳು.
ಬಿ ಫಾರ್ಮ್ ರ‍್ಯಾಂಕ್- 2,66,256 ವಿದ್ಯಾರ್ಥಿಗಳು.
ಫಾರ್ಮ್ ಆ ರ‍್ಯಾಂಕ್ ಪಡೆದವರು- 2,66,757 ವಿದ್ಯಾರ್ಥಿಗಳು.
ನರ್ಸಿಂಗ್ ರ‍್ಯಾಂಕ್ ಪಡೆದವರು- 2,08,171 ವಿದ್ಯಾರ್ಥಿಗಳು.
ಟಾಪ್ 3 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ:
> ಎಂಜಿನಿಯರ್ ರ‍್ಯಾಂಕ್
1. ಭವೇಶ್ ಜಯಂತಿ- 99.06% ಚೈತನ್ಯ ಟೆಕ್ನೋ ಮಾರತ್ ಹಳ್ಳಿ.
2. ಸಾತ್ವಿಕ್ ಬಿರಾದರ್- 98.83% ಚೈತನ್ಯ ಟೆಕ್ನೊ ಉತ್ತರಹಳ್ಳಿ
3. ದಿನೇಶ್ ಗೋಮತಿ- 98.67% ಚೈತನ್ಯ ಟೆಕ್ನೋ ಮಾತರ್ ಹಳ್ಳಿ.
> ವೆಟರ್ನರಿ ರ‍್ಯಾಂಕ್
1. ಹರೀಶ್ ರಾಜ್- ನಾರಾಯಣ ಇ ಟೆಕ್ನೊ, ದೊಡ್ಡ ಬೆಟ್ಟಹಳ್ಳಿ
2. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
3. ಸಪಲ್ S ಶೆಟ್ಟಿ- ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು.
> ಅಗ್ರಿಕಲ್ಚರ್ ರ‍್ಯಾಂಕ್
1. ಅಕ್ಷಯ್ ಒ ಹೆಗ್ಡೆ- ಆಳ್ವಾಸ್ ಪಿಯು ಕಾಲೇಜ್, ಮೂಡಬಿದಿರೆ.
2. ಸಾಯಿಶ್ ಶ್ರವಣ್ ಪಂಡಿತ್-ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು
3. ಸುಚಿತ್ ಪಿ ಪ್ರಸಾದ್- ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು.
>BNYS ರ‍್ಯಾಂಕ್
1. ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ
2. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
3. ಸಫಲ್ ಎಸ್ ಶೆಟ್ಟಿ- ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು.
> ನರ್ಸಿಂಗ್ ರ‍್ಯಾಂಕ್
1. ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ
2. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
3. ಸಫಲ್ ಎಸ್ ಶೆಟ್ಟಿ- ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು.
> ಫಾರ್ಮ್ D ರ‍್ಯಾಂಕ್
1. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
2. ಭವೇಶ್ ಜಯಂತಿ- ಚೈತನ್ಯ ಟೆಕ್ನೊ, ಮಾರತ್ ಹಳ್ಳಿ.
3. ಹರೀಶ್ ರಾಜ್, ನಾರಾಯಣ ಇ ಟೆಕ್ನೊ ದೊಡ್ಡಬೆಟ್ಟಹಳ್ಳಿ
> B ಫಾರ್ಮ್ ರ‍್ಯಾಂಕ್
1. ಆತ್ರೇಯ ವೆಂಕಟಾಚಲಂ- ನ್ಯಾಷನಲ್ ಪಬ್ಲಿಕ್ ಸ್ಕೂಲ್, HSR ಲೇಔಟ್.
2. ಭವೇಶ್ ಜಯಂತಿ- ಚೈತನ್ಯ ಟೆಕ್ನೊ, ಮಾರತ್ ಹಳ್ಳಿ.
3. ಹರೀಶ್ ರಾಜ್, ನಾರಾಯಣ ಇ ಟೆಕ್ನೊ,ದೊಡ್ಡಬೆಟ್ಟಹಳ್ಳಿ ಯಲಹಂಕ.
> ವೆಟರ್ನರಿ ಪ್ರಾಕ್ಟಿಕಲ್ ರಾಂಕ್
1. ರಕ್ಷಿತಾ- HMR ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಯಾಣ ನಗರ
2. ನಂದನ್ ಟಿ.ಎಸ್- RK ವಿಷನ್ ಪಿಯು ಕಾಲೇಜ್, ಚಿಕ್ಕಬಳ್ಳಾಪುರ
3. ಭುವನೇಶ್ವರಿ- ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜ್, ರಾಯಚೂರು.
ಅಗ್ರಿಕಲ್ಚರ್ ಪ್ರಾಕ್ಟಿಕಲ್ ರಾಂಕ್
1. ಕೀರ್ತನಾ- ಶಾರದಾಂಬ ಪಿಯು ಕಾಲೇಜ್,ತುಮಕೂರು
2. ರಕ್ಷಿತಾ- HMR ನ್ಯಾಷನಲ್ ಪಿಯು ಕಾಲೇಜ್, ಕಲ್ಯಾಣ ನಗರ
3. ಅಶ್ವಿನಿ ಯಕ್ಕುಂಡಿ- ಎಕ್ಸಲೆನ್ಸ್ ಸೈನ್ಸ್ ಪಿಯು ಕಾಲೇಜ್, ವಿಜಯಪುರ.ಇದನ್ನೂ ಓದಿ: ರಾಜ್ಯದಲ್ಲಿ 35 ಕೋವಿಡ್ ಸಕ್ರಿಯ ಕೇಸ್, ಆತಂಕಪಡಬೇಕಿಲ್ಲ: ದಿನೇಶ್ ಗುಂಡೂರಾವ್