ರಾಂಚಿ: ಜಾರ್ಖಂಡ್‌ನ (Jarkhand Maoist Encounter) ಲತೇಹಾರ್ ಜಿಲ್ಲೆಯಲ್ಲಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ಪ್ರಮುಖ ನಕ್ಸಲ್ ನಾಯಕರ ಎನ್‌ಕೌಂಟರ್ ಆಗಿದೆ.
ಶನಿವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ನಕ್ಸಲ್ ದಂಗೆಕೋರ ಸಂಘಟನೆ ಜಾರ್ಖಂಡ್ ಜನ ಮುಕ್ತಿ ಪರಿಷತ್ (ಜೆಜೆಎಂಪಿ)ನ ಇಬ್ಬರು ಕಾರ್ಯಕರ್ತರು ಹತರಾಗಿದ್ದಾರೆ. ಮೃತರಲ್ಲಿ ಪಪ್ಪು ಲೋಹ್ರಾನ ತಲೆಗೆ 10 ಲಕ್ಷ ರೂ. ಹಾಗೂ ಪ್ರಭಾತ್ ಗಂಜು ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಇದನ್ನೂ ಓದಿ: ಭಾರತದಲ್ಲಿ ಐಫೋನ್ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್ ವಾರ್ನಿಂಗ್
ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ನಕ್ಸಲರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಇತ್ತು. ಮಾಹಿತಿ ಆಧಾರದ ಮೇಲೆ ಜಂಟಿ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದವು. ಭೀಕರ ಗುಂಡಿನ ಚಕಮಕಿಯ ಸಮಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಮತ್ತೊರ್ವ ಜೆಜೆಎಂಪಿ ನಕ್ಸಲನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ.
ಸ್ಥಳದಿಂದ ಒಂದು ಐಎನ್‌ಎಸ್‌ಎಎಸ್ ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯ ಕಾರ್ಯಚರಣೆ ಇನ್ನು ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಜೆಜೆಎಂಪಿ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವುದು ಗಮನಾರ್ಹ. ಇದನ್ನೂ ಓದಿ: IPL 2025 | ಕೊನೆಯಲ್ಲಿ ʻಸನ್ʼ ಸ್ಟ್ರೋಕ್ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?