ಲಕ್ನೋ: ಆರ್‌ಸಿಬಿ (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಎಂದಿನಂತೆ ಸ್ಫೋಟಕ ಪ್ರದರ್ಶನವನ್ನೇ ನೀಡಿದರು. ಈ ವೇಳೆ ಅಭಿ ಹೊಡೆದ ಸಿಕ್ಸ್‌ವೊಂದು ಪ್ರಮೋಷನ್‌ಗಾಗಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ಗೆ ಬಡಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
#AbhishekSharma starts with fireworks! Sends it sailing for six!
Will #RCB find a way to contain the onslaught in their #Race2Top2?
Watch the LIVE Action 👉 https://t.co/SI62QyCPRK#IPLOnJioStar 👉 #RCBvSRH | LIVE NOW on Star Sports Network & JioHotstar pic.twitter.com/fQJxgRorEu
— Star Sports (@StarSportsIndia) May 23, 2025
ಆರಂಭಿಕನಾಗಿ ಕಣಕ್ಕಿಳಿದಿದ್ದ ಶರ್ಮಾ ಸಿಕ್ಸರ್, ಬೌಂಡರಿ ಬಾರಿಸಲು ಮುಂದಾಗಿದ್ದರು. 17 ಎಸೆತಗಳಲ್ಲಿ 34 ರನ್ ಸಿಡಿಸಿದರು. ಅಭಿಷೇಕ್ ಶರ್ಮಾ ಸಿಡಿಸಿದ ಒಂದು ಸಿಕ್ಸರ್ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರಿನ ಗಾಜನ್ನು ಒಡೆದಿದೆ. ಇದರಿಂದ ಐಪಿಎಲ್ ಪ್ರಾಯೋಜಕ ಸಂಸ್ಥೆಗೆ 5 ಲಕ್ಷ ರೂ. ನಷ್ಟವಾಗಿದೆ. ಇದನ್ನೂ ಓದಿ: ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ
ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಆರ್‌ಸಿಬಿ ತಂಡದ ಇಂದಿನ ಪಂದ್ಯದ ನಾಯಕ ಜೀತೇಶ್ ಶರ್ಮಾ ಅವರು ಭುವನೇಶ್ವರ್ ಕುಮಾರ್ ಅವರನ್ನು ಬೌಲಿಂಗ್ ಮಾಡಲು ಕರೆತಂದಾಗ ಈ ಘಟನೆ ಸಂಭವಿಸಿತು.
ಆ ಓವರ್‌ನ 5ನೇ ಎಸೆತದಲ್ಲಿ ಅಭಿಷೇಕ್ ಮಿಡ್‌ವಿಕೆಟ್ ಕಡೆಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಚೆಂಡು ನೇರವಾಗಿ ಐಪಿಎಲ್ 2025 ಲೀಗ್‌ನ ಪ್ರಾಯೋಜಕರಾದ ಟಾಟಾ ಅವರ ಕಾರಿನ ಮೇಲೆ ಬಿದ್ದಿತು. ಇದರಿಂದಾಗಿ ಕಾರಿನ ಮುಂಭಾಗದ ಗಾಜು ಬಿರುಕು ಬಿಟ್ಟಿದೆ. ಇದನ್ನೂ ಓದಿ: ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್ ಬ್ಯಾಟರ್
5 ಲಕ್ಷ ರೂ. ದೇಣಿಗೆ ನೀಡಲಿದೆ
ಐಪಿಎಲ್ 2025 ಪ್ರಾರಂಭವಾಗುವ ಮೊದಲು, ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಕಾರಿನ ಮೇಲೆ ನೇರವಾಗಿ ಶಾಟ್ ಹೊಡೆದರೆ ಹಣವನ್ನು ದೇಣಿಗೆ ನೀಡುವುದಾಗಿ ಟಾಟಾ ಘೋಷಿಸಿತ್ತು. ಒಂದು ವೇಳೆ ಚೆಂಡು ಕಾರಿಗೆ ತಗುಲಿದರೆ, ಟಾಟಾ ಸಂಸ್ಥೆಯು 5 ಲಕ್ಷ ರೂ. ಗಳನ್ನು ದೇಣಿಗೆ ನೀಡುತ್ತದೆ. ಈ ಮೊತ್ತವನ್ನು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ ಟಾಟಾ ಕಾರ್ ದೇಣಿಗೆ ನೀಡಲಿದೆ.
ಇನ್ನೂ ಆರ್‌ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಸಿಡಿಸಿದೆ.