ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ

Public TV
3 Min Read
H D Kumaraswamy 4

– ದಲಿತರ ಭೂಮಿ ಕಬಳಿಸಿದವರನ್ನ ಸಿಎಂ ಜೊತೆಯಲಿಟ್ಟುಕೊಂಡಿದ್ದಾರೆಂದು ಲೇವಡಿ

ನವದೆಹಲಿ: ಐತಿಹಾಸಿಕ ಮಹತ್ವ ಹೊಂದಿರುವ ರಾಮನಗರ ಹೆಸರನ್ನು ಕಿತ್ತು ಹಾಕಿ ಬೆಂಗಳೂರು ದಕ್ಷಿಣ(Bengaluru South) ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(H D Kumaraswamy) ಅವರು ತೀವ್ರ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2007ರಲ್ಲಿ ನಾನು ತೀರ್ಮಾನ ಮಾಡುವಾಗ ಆಗ ವಿರೋಧ ಮಾಡಬಹುದಾಗಿತ್ತು ಆಗ ಮಾಡಲಿಲ್ಲ. ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ರಾಮನಗರ ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ್ದರು. ನೆಹರು ಅವರಿಗೆ ಸಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದಿದ್ದರೆ ನಾನು ಅಭಿನಂದಿಸುತ್ತಿದ್ದೆ. ಕೆಂಗಲ್ ಅವರ ಹೆಸರಿಟ್ಟರೆ ಇವರ ಭೂಮಿಗಳಿಗೆ ಬೆಲೆ ಬರುವುದಿಲ್ಲವಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋದಲ್ಲಿ ಡ್ರೋನ್‌ ದಾಳಿ!

ರಾಮನಗರ(Ramanagara) ಹೆಸರನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಎಂದು ಹೆಸರು ಇಟ್ಟುಕೊಂಡಿರುವುದು ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಅವರು ತಮ್ಮ ಭೂಮಿಗಳ ಬೆಲೆಯನ್ನು ಏರಿಸುವ ಷಡ್ಯಂತ್ರದ ಭಾಗವಾಗಿದೆ. ಅವರು ಯಾಕಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ? ಅದರ ಹಿಂದಿನ ದುರುದ್ದೇಶ ಏನಿದೆ? ಎಂಬುದು ಗೊತ್ತಿದೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅದಕ್ಕೆ ತಿರುಗಿಸಿ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಅಯೋಧ್ಯೆ ರಾಮನ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ವಿವಾದ – ದಕ್ಷಿಣ ರಾಮಮಂದಿರ ಮಾಡಲು ಮುಂದಾದ ಜಮೀನು ಮಾಲೀಕ

ಇಂತಹ ರಾಜಕಾರಣಕ್ಕೆ ನಾನು ಸೊಪ್ಪು ಹಾಕುವುದಿಲ್ಲ. ಕೇಂದ್ರ ಗೃಹ ಸಚಿವರಿಗೆ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಪ್ರಸ್ತಾಪ ಕಳಿಸಿದ್ದು, ಅದು ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇವರು ಮಾಡಿದ್ದು ಮುಂದೆ ಬದಲಾಗಲಿದೆ. ಅದೂ ನನಗೆ ಗೊತ್ತಿದೆ. ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲಾ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತಿದೆ ಎನ್ನವುದು ಅವರಿಗೆ ಗೊತ್ತಿದೆ. ರಾಮನಗರ ಜಿಲ್ಲೆಯಾದಾಗಲೇ ರೈತರ ಭೂಮಿಗೆ ಬೆಲೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಲ್ಲಾ ಸಂದರ್ಭಕ್ಕೂ ನಗುವೇ ಒಳ್ಳೆಯ ಉತ್ತರ – ದರ್ಶನ್ ಭೇಟಿ ಬಳಿಕ ಪವಿತ್ರಾ ಪೋಸ್ಟ್!

ನನ್ನ ಜಮೀನಿಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಆ ಜಮೀನನ್ನು ಕೂಡ ಕಿತ್ತುಕೊಳ್ಳಲು ಕುತಂತ್ರ ಮಾಡಿದ್ದಾರೆ ಇವರು. 40 ವರ್ಷಗಳ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್‌ಐಟಿ ಅಂತ ರಚನೆ ಮಾಡಿಕೊಂಡು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದರ ವಿರುದ್ಧ ನಾನೂ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

ಇವರು ನನ್ನ ವಿರುದ್ಧ ಕಿರುಕುಳ, ಕುತಂತ್ರ ಮಾಡುತ್ತಿದ್ದಾರೆ. ಹೀಗೆಯೇ ಅವರು ಮಾಡುತ್ತಿರಲಿ, ಇವರು ಲೂಟಿ ಹೊಡೆದಿರುವ ಶೇ.50ರಷ್ಟು ಸರ್ಕಾರಿ ಭೂಮಿಗಳಿವೆ. ಇವರು ಏನೆಲ್ಲಾ ಅನ್ಯಾಯ, ಅಕ್ರಮ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀಡಲಾದ ಜಾಗ ನುಂಗಿದ್ದು ಯಾರು? ಎಂದು ಕೇಳಿದರು. ಇದನ್ನೂ ಓದಿ: ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ

ದಲಿತರ ಭೂಮಿ ಕಬಳಿಸಿದವರನ್ನು ಸಿದ್ದರಾಮಯ್ಯ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ದ್ವಂದ್ವ ನೀತಿ ಬಗ್ಗೆ ಕಿಡಿಕಾರಿದ ಅವರು, ಸಿದ್ದಾರಾಮಯ್ಯ ಅವರು ತಾವು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ದುರಂತವೆಂದರೆ, ದಲಿತರ ಭೂಮಿ ಕಬಳಿಸಿದವರನ್ನೇ ತಮ್ಮ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಈಗ ನೋಡಿದರೆ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ. ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ದಲಿತ ವಿರೋಧಿ ನೀತಿ ಎಂದು ವಾಗ್ದಾಳಿ ನಡೆಸಿದರು.

Share This Article