ನಾನು ಒತ್ತಾಯಪೂರ್ವಕವಾಗಿ ದೂರು ನೀಡಿಲ್ಲ. ನಾನು ಸತ್ತರೂ ಯಾರು ಕಾರಣರಲ್ಲ ಎಂದು ಮಡೆನೂರು ಮನು (Madenur Manu Case) ರೇಪ್ ಕೇಸ್ ಬಗ್ಗೆ ಸಂತ್ರಸ್ತೆ ನಟಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದನ್ನೂ ಓದಿ:ಅಪ್ಪಂಗೂ, ತಾತನಿಗೂ ಇಬ್ರೂ ಹೆಂಡ್ತಿರು, ನಿನ್ನ ಮದ್ವೆ ಆಗ್ತೀನಿ ಅಂತ ಕಥೆ ಕಟ್ಟಿದ್ದ- ಮನು ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತೆ

ಇದರಿಂದ ಸಿನಿಮಾಗೆ ತೊಂದರೆ ಆಗ್ತಿದೆ ಅಂತ ನನಗೆ ಗೊತ್ತಾಯ್ತು. ಬಳಿಕ ಅವರು ಲಾಯರ್‌ನ ಮೀಟ್ ಮಾಡಿಸಿ ನಮ್ಮ ತಪ್ಪಿನ ಬಗ್ಗೆ ಅರಿವು ಮಾಡಿಸಿದ್ದರು. ನಾನು ಸತ್ತರೂ ಕೂಡ ಇದಕ್ಕೆ ಯಾರು ಕಾರಣರಲ್ಲ. ಇದು ನನ್ನ ಸ್ವಂತ ನಿರ್ಧಾರ. ಮನುನೇ ಆಗಲಿ, ಚಿತ್ರದ ನಿರ್ಮಾಪಕರಾಗಲಿ ಯಾರು ಕಾರಣರಲ್ಲ. ಯಾರು ಒತ್ತಾಯಪೂರ್ವಕವಾಗಿ ದೂರು ನೀಡಿಸಿಲ್ಲ. ಹಾಗೆಯೇ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ವಿಡಿಯೋ ಮೂಲಕ ಸಂತ್ರಸ್ತೆ ನಟಿ ಹೇಳಿದ್ದಾರೆ.
ಚಿತ್ರತಂಡಕ್ಕೆ ಕ್ಷಮೆಯಾಚಿಸಿರುವ ಸಂತ್ರಸ್ತೆ ಎಲ್ಲಿಯೂ ಕೂಡ ವಿಡಿಯೋದಲ್ಲಿ ತಾವು ಕೊಟ್ಟಿರುವ ದೂರನ್ನ ಹಿಂಪಡೆಯುವ ಬಗ್ಗೆ ಪ್ರಸ್ತಾಪಿಸಿಲ್ಲ.


