ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ಮಡೆನೂರು ಮನುನನ್ನ (Madenur Manu) ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಸನದಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬಳಿಕ ಪ್ರಾಥಮಿಕವಾಗಿ ನಡೆದ ವಿಚಾರಣೆಯಲ್ಲಿ ಹಲವು ರಹಸ್ಯೆಗಳನ್ನು ಮನು ಬಾಯ್ಬಿಟ್ಟಿದ್ದಾರೆ. ಈ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿಗಳು ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಅದು ಅತ್ಯಾಚಾರ ಅಲ್ಲ, ಒಪ್ಪಂದದ ಸಂಪರ್ಕ. ನಟಿಯನ್ನು ಮದುವೆ ಆಗದ್ದೇನೆ. ಮೂವರ ಮಾತು ಕೇಳಿ, ಆಕೆ ದೂರು ನೀಡಿದ್ದಾಳೆ. ಇಬ್ಬರೂ ಹೀರೋ, ಒಬ್ಬಳು ಲೇಡಿ ಡಾನ್ ಮಾತು ಕೇಳಿ ದೂರು ದಾಖಲಿಸಿದ್ದಾಳೆ. ಲೇಡಿ ಡಾನ್ ನಟಿಗೆ ಆತ್ಮಿಯಳು. ಕಾಮಿಡಿ ಕಿಲಾಡಿಗಳು ಶೋ ನಟಿ ಅಂತ ಮಾಹಿತಿ ನೀಡಿದ್ದಾರೆ ಮನು. ಇದನ್ನೂ ಓದಿ: ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್ ಇದ್ದಾಳೆ – ರೇಪ್ ಕೇಸ್ ದಾಖಲಾದ ಬಳಿಕ ಮಡೆನೂರು ಮನು ಬಾಂಬ್
ಸಿನಿಮಾ ಹಾಳು ಮಾಡಲೆಂದೇ ಆ ಮೂವರು ಪ್ಲ್ಯಾನ್ ಮಾಡಿದ್ದಾರೆ. ನಾನು ನಟಿಗೆ ಹಿಂಸೆ ನೀಡಿಲ್ಲ. ಆಕೆಯೇ ನನಗೆ ತೊಂದರೆ ಕೊಡ್ತಿದ್ದಾಳೆ ಎಂದು ಪ್ರತ್ಯಾರೋಪ ಮಾಡಿರುವುದಲ್ಲದೇ ತನ್ನ ಬಳಿಯಿರುವ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದನ್ನೂ ಓದಿ: ರೇಪ್ ಮಾಡಿ ಗರ್ಭಪಾತ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್ – ಸಹ ಕಲಾವಿದೆಯ ದೂರಿನಲ್ಲಿ ಏನಿದೆ?
ಸಂಭಾವನೆ ನೀಡುವ ನೆಪದಲ್ಲಿ ಬಂದು ನನ್ನ ಮೇಲೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಅತ್ಯಾಚಾರ (Rape) ಎಸಗಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆ ದೂರು ನೀಡಿದ್ದರು. ದೂರಿನ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ಇತ್ತ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಹಾಸನದ ಶಾಂತಿಗ್ರಾಮದ ಮಡೆನೂರಿನಲ್ಲಿ ತಲೆಮರೆಸಿಕೊಂಡಿದ್ದ ಮನುವನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದರು.
ಮಡೆನೂರು ಮನು ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ