ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮಾಜಿ ಅತ್ತೆ, ಸೊಸೆ – ಸಮಂತಾ ಮಾತಿಗೆ ಅಮಲಾ ಚಪ್ಪಾಳೆ

Public TV
1 Min Read
samantha

ಟಿ ಸಮಂತಾ (Samantha) ಮತ್ತು ಮಾಜಿ ಅತ್ತೆ ಅಮಲಾ (Amala Akkineni) ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಸಮಂತಾ ಭಾಷಣಕ್ಕೆ ಅಮಲಾ ಚಪ್ಪಾಳೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ:100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್

samantha 2 1

ಸಮಂತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 15 ವರ್ಷಗಳಾಗಿವೆ. ಇಂದಿಗೂ ನಟಿಗೆ ಫ್ಯಾನ್ಸ್ ಕ್ರೇಜ್ ಇದೆ. ಹೀಗಾಗಿ ನಟಿಯ ಸಾಧನೆಗೆ ಜೀ ತೆಲುಗು ಅವಾಡ್ಸ್ ಕಾರ್ಯಕ್ರಮದಲ್ಲಿ ‘ಕ್ವೀನ್ ಆಫ್ ಸಿಲ್ವರ್ ಸ್ಕ್ರೀನ್’‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅವರ ಮಾಜಿ ಅತ್ತೆ ಅಮಲಾ ಕೂಡ ಭಾಗವಹಿಸಿದ್ದರು. ಇದನ್ನೂ ಓದಿ:ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

 

View this post on Instagram

 

A post shared by Zee Telugu (@zeetelugu)

ಕಾರ್ಯಕ್ರಮದಲ್ಲಿ ಸಮಂತಾ ಮಾತನಾಡಿ, ತೆಲುಗು ಚಿತ್ರರಂಗ ನನಗೆ ಎಲ್ಲವನ್ನೂ ನೀಡಿದೆ. ಇದೇ ನನ್ನ ಕರ್ಮ ಭೂಮಿ. ತೆಲುಗು ಪ್ರೇಕ್ಷಕರಿಗೆ ಯಾವಾಗಲೂ ನಾನು ಮೊದಲ ಸ್ಥಾನ ಕೊಡುತ್ತೇನೆ ಎಂದು ಭಾವುಕವಾಗಿ ಸಮಂತಾ ಮಾತನಾಡಿದರು. ಈ ವೇಳೆ ಸ್ಯಾಮ್ ಮಾತಿಗೆ, ಅಮಲಾ ನಗು ನಗುತ್ತಾ ಚಪ್ಪಾಳೆ ತಟ್ಟಿದ್ದಾರೆ.

ಅಂದಹಾಗೆ, 2010ರಲ್ಲಿ ‘ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ನಾಗಚೈತನ್ಯಗೆ ನಾಯಕಿ ಸಮಂತಾ ನಟಿಸಿದರು. ಇಲ್ಲಿಯೇ ನಾಗಚೈತನ್ಯರನ್ನು ನಟಿ ಮೊದಲು ಭೇಟಿಯಾದರು. ಈ ಪರಿಚಯ ಪ್ರೀತಿಗೆ ತಿರುಗಿ ಮದುವೆಗೆ ಮುನ್ನಡಿ ಬರೆದಿತ್ತು. 2017ರಲ್ಲಿ ಇಬ್ಬರೂ ಮದುವೆಯಾದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.

TAGGED:
Share This Article