ಬಾಲಿವುಡ್‌ಗೆ ಅಥಿಯಾ ಗುಡ್ ಬೈ – ಅಧಿಕೃತವಾಗಿ ತಿಳಿಸಿದ ತಂದೆ ಸುನೀಲ್ ಶೆಟ್ಟಿ

Public TV
1 Min Read
suniel shetty athiya shetty

‘ಹೀರೋ’ ಚಿತ್ರದ (Hero) ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟಿದ್ದ ನಟಿ ಅಥಿಯಾ ಶೆಟ್ಟಿ (Athiya Shetty) ಈಗ ಚಿತ್ತರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ತಂದೆ ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ:ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

suniel shettyಸಂದರ್ಶನವೊಂದರಲ್ಲಿ ಮಗಳು ಅಥಿಯಾ ಬಾಲಿವುಡ್ ತೊರೆದಿರುವ ಬಗ್ಗೆ ಸುನೀಲ್ ಶೆಟ್ಟಿ (Suniel Shetty) ತಿಳಿಸಿದ್ದಾರೆ. ನನಗೆ ಸಿನಿಮಾ ಬೇಡ, ನಟಿಸಲು ನನಗೆ ಇಷ್ಟವಿಲ್ಲವೆಂದು ಅಥಿಯಾ ಹೇಳಿದಕ್ಕಾಗಿ ನಾನು ಅಭಿನಂದಿಸುತ್ತೇನೆ. 2019ರ ‘ಮೋತಿಚೂರ್ ಚಕ್ನಾಚೂರ್’ ಚಿತ್ರದ ಬಳಿಕ ಹಲವು ಆಫರ್‌ಗಳು ಅವಳಿಗೆ ಸಿಕ್ಕಿತ್ತು. ಆಗ ಅಥಿಯಾ ನನಗೆ ಸಿನಿಮಾ ಬೇಡ, ನಾನು ಆರಾಮಾಗಿದ್ದೇನೆ ಗೊತ್ತಾ ಎಂದಿದ್ದಳು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಇನ್ಮುಂದೆ ಮಗಳು ಸಿನಿಮಾ ಮಾಡಲ್ಲ ಎಂಬುದನ್ನು ಅಧಿಕೃತವಾಗಿ ಹೇಳಿದ್ದಾರೆ.

athiya shetty

ಅಥಿಯಾ ಸದ್ಯ ಮಗಳ ಕಡೆ ಗಮನ ಹರಿಸುತ್ತಿದ್ದಾಳೆ. ಈಗ ಅವಳು ಜೀವನದ ಬೆಸ್ಟ್ ರೋಲ್ ನಿರ್ವಹಿಸುತ್ತಿದ್ದಾಳೆ. ಇದನ್ನು ಅಥಿಯಾ ಪ್ರೀತಿಯಿಂದ ಮಾಡುತ್ತಿದ್ದಾಳೆ ಅಂತಲೂ ಸುನೀಲ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

athiya shetty2023ರಲ್ಲಿ ಕೆ.ಎಲ್ ರಾಹುಲ್ (K.L Rahul) ಜೊತೆ ಅಥಿಯಾ ಶೆಟ್ಟಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಮುದ್ದಾದ ಹೆಣ್ಣು ಮಗುವನ್ನು ಅಥಿಯಾ ದಂಪತಿ ಬರಮಾಡಿಕೊಂಡರು. ಮಗುವಿಗೆ ‘ಇವಾರಾ’ ಎಂದು ಹೆಸರಿಟ್ಟಿದ್ದಾರೆ.

ಸೂರಜ್ ಪಾಂಚೋಲಿ ಜೊತೆ ಹೀರೋ ಚಿತ್ರ, ಮುಬಾರಕನ್, ಮೋತಿಚೂರ್ ಚಕ್ನಾಚೂರ್ ಚಿತ್ರಗಳಲ್ಲಿ ಅಥಿಯಾ ಶೆಟ್ಟಿ ನಟಿಸಿದ್ದಾರೆ.

Share This Article