ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ – ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಓಪನ್

Public TV
2 Min Read
dinesh gundu rao 3

ಬೆಂಗಳೂರು: ಕ್ಯಾನ್ಸರ್ (Cancer) ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಕೀಮೋಥೆರಪಿ (Chemotherapy) ಕೇಂದ್ರಗಳನ್ನು ಓಪನ್ ಮಾಡಲಾಗುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

ವಿಕಾಸ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಆಗ್ತಾ ಇದೆ. ಹೀಗಾಗಿ, ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಓಪನ್ ಆಗಲಿವೆ. ಪ್ರತಿ ವರ್ಷ 70 ಸಾವಿರ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಳ್ಳುತ್ತಾ ಇದೆ. ಅವರು ಬೆಂಗಳೂರಿಗೆ ಬರಬೇಕು. ಬಡವರು ಕಿದ್ವಾಯಿಯಂತಹ ಸಂಸ್ಥೆಗಳಿಗೆ ಬರಬೇಕು. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಅಂತಾ ಓಪನ್ ಮಾಡ್ತಾ ಇದ್ದೇವೆ. ರೋಗಿಗಳು ಹೆಚ್ಚಾಗ್ತಾ ಇದ್ದಾರೆ. ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಕೀಮೋ ಥೆರಪಿಗಾಗಿ 60% ರೋಗಿಗಳು 100 ಕಿಮೀ ಪ್ರಯಾಣ ಮಾಡಬೇಕು. ಸಮಯ ಮತ್ತು ತೊಂದರೆ, ಖರ್ಚು ಹೆಚ್ಚಾಗ್ತಾ ಇದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಓಪನ್ ಮಾಡ್ತಾ ಇದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ – ಹಠ ಸಾಧಿಸಿ ಗೆದ್ದ ಡಿಕೆಶಿ

CANCER 1

ಕಳೆದ ಆಯವ್ಯಯ ಬಜೆಟ್‌ನಲ್ಲಿ ಕೀಮೋ ಥೆರಪಿ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ವಿ. ನಾಳೆ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ಮುಖ್ಯಮಂತ್ರಿಗಳೇ ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ತರಬೇತಿ ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ ಮಾಡಿದ್ದೇವೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ. ಇಬ್ಬರು ನರ್ಸ್‌ಗಳು ಇರ್ತಾರೆ. ಉಚಿತ ಚಿಕಿತ್ಸೆಗೆ ತುಂಬಾ ಅನುಕೂಲ ಆಗಲಿದೆ. ಬಿಪಿಎಲ್ ಕುಟುಂಗಳಿಗೆ ಉಚಿತವಾಗಿ ಆಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

ಕೋವಿಡ್ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, ಯಾರೂ ಗಾಬರಿ ಪಡುವ ಅಗತ್ಯವಿಲ್ಲ. 16 ಆಕ್ಟಿವ್ ಕೇಸ್ ಇದಾವೆ ಅಷ್ಟೇ. ಮಾನಿಟರ್ ಮಾಡಿ ಅಂತಾ ಹೇಳಿದ್ದೇವೆ. ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವ್ಯಾವ ಆಸ್ಪತ್ರೆಗಳಲ್ಲಿ ಕೀಮೋ ಥೆರಪಿ ಕೇಂದ್ರ?
* ಇನ್-ಹೌಸ್, ವಿಜಯಪುರ
* ಇನ್-ಹೌಸ್, ಉಡುಪಿ
* ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿ
* ಹೆಚ್‌ಸಿಜಿ ಹಾಸ್ಪಿಟಲ್ ಧಾರವಾಡ, ಧಾರವಾಡ
* ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚಿತ್ರದುರ್ಗ
* ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಜಯನಗರ
* ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಾವೇರಿ
* ಸಂಜೀವಿನಿ ಆಸ್ಪತ್ರೆ, ಬೆಂಗಳೂರು ಗ್ರಾಮಾಂತರ
* ಸಂಜೀವಿನಿ ಆಸ್ಪತ್ರೆ, ರಾಮನಗರ
* ಸಂಜೀವಿನಿ ಆಸ್ಪತ್ರೆ, ಬೆಂಗಳೂರು ನಗರ, ಸಿ.ವಿ.ರಾಮನ್ ಆಸ್ಪತ್ರೆ
* ಕೆಎಂಸಿ, ಮಂಗಳೂರು, ದಕ್ಷಿಣ ಕನ್ನಡ
* ಕಿದ್ವಾಯಿ ಆಸ್ಪತ್ರೆ, ಮೈಸೂರು
* ಸಿದ್ಧಾರ್ಥ ಮೆಡಿಕಲ್ ಕಾಲೇಜು, ತುಮಕೂರು
* ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಕೋಲಾರ
* ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಬಾಗಲಕೋಟೆ

Share This Article