ರಾಕಿಂಗ್ ಸ್ಟಾರ್ ಯಶ್ (Yash) ತಾಯಿ ಪುಷ್ಪ ಅರುಣ್ ಕುಮಾರ್ ಅವರು ‘ಕೊತ್ತಲವಾಡಿ’ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ (Radhika Pandit) ಕಮ್ ಬ್ಯಾಕ್ ಚಿತ್ರಕ್ಕೆ ನಿರ್ಮಾಣ ಮಾಡ್ತಾರಾ ಎಂಬುದರ ಬಗ್ಗೆ ಪುಷ್ಪ (Pushpa Arun Kumar) ಮಾತನಾಡಿದ್ದಾರೆ. ಇದನ್ನೂ ಓದಿ:ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ದಾಂಪತ್ಯದ ಪಾಠ ಹೇಳಿದ ರಾಧಿಕಾ ಪಂಡಿತ್
ನಿರ್ಮಾಪಕಿಯಾಗಿರುವ ಯಶ್ ತಾಯಿ ಮುಂದೆ ಸೊಸೆ ರಾಧಿಕಾಗೂ ನಿರ್ಮಾಣ ಮಾಡ್ತಾರಾ ಎಂದು ಕೇಳಲಾದ ಪ್ರಶ್ನೆಗೆ, ಅವರ ಯಜಮಾನ್ರು ಯಶ್ ನನಗಿಂತ ದೊಡ್ಡ ಬ್ಯಾನರ್ ಮಾಡಿದ್ದಾರೆ. ಅದರಲ್ಲೇ ಬೇಕಾದಷ್ಟು ಕೆಲಸ ಮಾಡಬಹುದು. ದೇಶ ವಿದೇಶದಲ್ಲಿ ಸಂಪಾದನೆ ಮಾಡೋವಷ್ಟು ಗಂಡ ದುಡಿಯುತ್ತಿದ್ದಾರೆ. ರಾಧಿಕಾ ನನ್ನತ್ರ ಯಾಕೆ ಬರುತ್ತಾರೆ ಎಂದಿದ್ದಾರೆ.
ರಾಧಿಕಾ ಸಿನಿಮಾಗೆ ನಿರ್ಮಾಣ ಮಾಡಬಹುದು. ಯಶ್‌ಗಿಂತ ನಾನು ಬೆಳೆಯೋಕೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ. ರಾಧಿಕಾರ ಡೇಟ್ ಕೊಡಿಸಿ, ನಾಳೆನೇ ಅವರಿಗೆ ಸಿನಿಮಾ ಮಾಡ್ತೀನಿ ಎಂದು ಖುಷಿಯಿಂದ ಸೊಸೆ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ:ಯಶ್‌ಗಿಂತ ರಾಧಿಕಾ ಸಖತ್ ಕಿಲಾಡಿ: ಸೊಸೆ ಬಗ್ಗೆ ಮಾತಾಡಿದ ನಿರ್ಮಾಪಕಿ ಪುಷ್ಪ
ಮದುವೆ ಬಳಿಕ ‘ಆದಿಲಕ್ಷ್ಮಿ ಪುರಾಣ’ ಎಂಬ ಚಿತ್ರ ನಿರೂಪ್ ಭಂಡಾರಿ ಜೊತೆ ಮಾಡಿದ್ದರು. ಇದು 2019ರಲ್ಲಿ ರಿಲೀಸ್ ಆಗಿತ್ತು. ಆದಾದ ನಂತರ ಯಶ್ ಜೊತೆ ಆ್ಯಡ್ ಶೂಟ್‌ಗಳಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ. ಈ ಗುಡ್ ನ್ಯೂಸ್‌ಗಾಗಿ ಅಪಾರ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅತ್ತೆ ಪುಷ್ಪ ಬ್ಯಾನರ್ ಅಲ್ಲಿ ಆದ್ರೂ ನಟಿಸಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.