ಯಡಿಯೂರಪ್ಪ, ವಿಜಯೇಂದ್ರ, ಕುಮಾರಸ್ವಾಮಿ ಪ್ರಾಮಾಣಿಕರಾ: ಸಿದ್ದರಾಮಯ್ಯ ಪ್ರಶ್ನೆ

Public TV
1 Min Read
siddaramaiah 1 2

– ದಲಿತ ನಾಯಕರ ಟರ್ಗೆಟ್‌: ಪರಮೇಶ್ವರ್ ಸಂಸ್ಥೆ ಮೇಲೆ ಇಡಿ ದಾಳಿ ಬಗ್ಗೆ ಸಿಎಂ ಪ್ರತಿಕ್ರಿಯೆ

ಬೆಂಗಳೂರು: ಯಡಿಯೂರಪ್ಪ, ವಿಜಯೇಂದ್ರ, ಕುಮಾರಸ್ವಾಮಿ ಪ್ರಾಮಾಣಿಕರಾ? ಅವರ ಮೇಲೆ ರೇಡ್ ಯಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದರು.

ಪರಮೇಶ್ವರ್ (G.Parameshwar) ಸಂಸ್ಥೆ ಮೇಲೆ ಇಡಿ ದಾಳಿ ಪರ‍್ಣ ಮಾಹಿತಿ ಗೊತ್ತಿಲ್ಲ. ನಿನ್ನೆ ಅಷ್ಟೆ 1 ಲಕ್ಷ ಜನರಿಗೆ ಹಕ್ಕು ಪತ್ರ ಕೊಟ್ಟಿದ್ದೇವೆ. ಪರಮೇಶ್ವರ್ ಅವರ ತಂದೆ ಗಂಗಯ್ಯ ಈ ವಿದ್ಯಾ ಸಂಸ್ಥೆ ಸ್ಥಾಪಿಸಿದವರು. ಪರಮೇಶ್ವರ್ ದಲಿತ ನಾಯಕರು. ರಾಜ್ಯ ರ‍್ಕಾರದ ಗೃಹ ಸಚಿವರು. ಅವರನ್ನು ಉದ್ದೇಶ ಪರ‍್ವಕವಾಗಿ ಟರ‍್ಗೆಟ್ ಮಾಡಲಾಗಿದೆ. ಯಡಿಯೂರಪ್ಪ ಹಾನೆಸ್ಟಾ? ವಿಜಯೇಂದ್ರ ಹಾನೆಸ್ಟಾ? ಕುಮಾರಸ್ವಾಮಿ ಹಾನೆಸ್ಟಾ? ಅವರ ಮೇಲೆ ರೇಡ್ ಯಾಕಿಲ್ಲಾ? ಕಾಂಗ್ರೆಸ್‌ನ ಹಿಂದುಳಿದ ದಲಿತ ನಾಯಕರ ಮೇಲೆ ದಾಳಿ ಆಗ್ತಿದೆ. ದಲಿತ ನಾಯಕರ ಟರ‍್ಗೆಟ್ ಮಾಡಿದ್ದಾರೆ ಅನ್ನಿಸುತ್ತೆ. ಮೊದಲು ಐಟಿಯವರು ಮಾಡಿದ್ದರು, ಈಗ ಇಡಿ ಮಾಡಿದ್ದಾರೆ ಎಂದು ಮಾತನಾಡಿದರು. ಇದನ್ನೂ ಓದಿ: ದೇವರು, ಧರ್ಮ ಬಿಜೆಪಿಯವರ ಆಸ್ತಿಯಾ..? ಟೀಕೆಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ: ಡಿ.ಕೆ.ಶಿವಕುಮಾರ್

G Parameshwar 1

ಮಳೆಹಾನಿ ವೀಕ್ಷಣೆಗೆ ನಾನು ಹೋಗುವ ಸ್ಥಳಕ್ಕೆ ರೆಡ್ ಕರ‍್ಪೆಟ್ ಹಾಕಿದ್ದು ಸುಳ್ಳು. ಅದು ಬಿಜೆಪಿ ಸೃಷ್ಟಿ. ನಾನು ಹೋದಾಗ ರೆಡ್ ಕರ‍್ಪೆಟ್ ಇರಲಿಲ್ಲ. ನಾನು ಹೋಗುವಾಗ ಎಲ್ಲಿತ್ತು? ಬಿಜೆಪಿಯವರೇ ರೆಡ್ ಕರ‍್ಪೆಟ್ ಹಾಕಿರುವುದು, ಅವರೇ ಮಾಡಿರುವುದು. ರೆಡ್ ಕರ‍್ಪೆಟ್ ಹಾಕಿದ್ದರೆ ತಪ್ಪು. ಆದರೆ, ನಾನಂತು ನೋಡಿಲ್ಲ. ಆ ರೀತಿ ವಿಡಿಯೋ ಮಾಡಿದ್ದರೆ ಅದು ಬಿಜೆಪಿಯವರೇ ಮಾಡಿದ್ದು ಎಂದು ಆರೋಪಿಸಿದರು.

ಪರಮೇಶ್ವರ್ ಪ್ರಕರಣಕ್ಕೆ ರನ್ಯಾ ರಾವ್ ಕೇಸ್ ಲಿಂಕ್ ಆರೋಪ ಬಗ್ಗೆ ಮಾತನಾಡಿ, ಅಶೋಕ್ ಗಂಭೀರವಾಗೇ ಇಲ್ಲ. ಗಂಭೀರ ಆರೋಪ ಹೇಗೆ ಮಾಡ್ತಾರೆ? ಅಶೋಕ್ ಅವರೇ ಇಡಿ ದಾಳಿ ಮಾಡಿಸಿರಬಹುದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್‌

ಬೈರತಿ ಬಸವರಾಜ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಬೈರತಿ ಬಸವರಾಜ್ ಕರೆದೇ ಇಲ್ಲ. ನಾನೇ ಅಲ್ಲಿ ಹೋಗಿದ್ದೆನಲ್ಲ. ಜನರ ಹತ್ತಿರ ಮಾತನಾಡಿ ಸಮಸ್ಯೆ ಆಲಿಸಿದ್ದೇನೆ ಎಂದು ತಿಳಿಸಿದರು.

Share This Article