ಬೆಂಗಳೂರು: ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಮಾಡ್ತಿರೋ ಅವರದ್ದೇ ಶಾಸಕ ಮುನಿರತ್ನ(Munirathna) ಬಗ್ಗೆ ಬಿಜೆಪಿ ನಾಯಕರೇ ಉತ್ತರ ಕೊಡಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್(D K Suresh) ಹೇಳಿದರು.
ಆರ್‌ಆರ್ ನಗರದ(RR Nagar) ಬಿಜೆಪಿ ಶಾಸಕ ಮುನಿರತ್ನ ಮೇಲೆ ಮತ್ತೊಂದು ಕೇಸ್ ದಾಖಲು ಆಗಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಆದ ಅವಮಾನ ಹಾಗೂ ಅವರ ಮೇಲಾಗಿರೋ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ. ಆತ್ಮಹತ್ಯೆಗೂ ಪ್ರಯತ್ನ ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗೃಹ ಸಚಿವ ಪರಮೇಶ್ವರ್‌ಗೆ ಇಡಿ ಶಾಕ್
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಮಾನ್ಯ ಶಾಸಕರು ಕಿರುಕುಳ ಕೊಡ್ತಿದ್ದಾರೆ. ಶಾಸಕರ ಹೆಸರಿನಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಇದರ ಬಗ್ಗೆ ಬಿಜೆಪಿ(BJP) ನಾಯಕರು ಉತ್ತರ ಕೊಡಬೇಕು. ಮುನಿರತ್ನರನ್ನ ಎಲ್ಲಾ ಕಡೆ ಬಿಜೆಪಿ ನಾಯಕರು ಫ್ರಂಟ್ ಲೈನ್‌ನಲ್ಲಿ ಕರೆದುಕೊಂಡು ತಿರುಗಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಉತ್ತರ ಹೇಳಿದ್ರೆ ಒಳ್ಳೆಯದು ಎಂದರು. ಇದನ್ನೂ ಓದಿ: ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!