ವಿಜಯನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಧಿಕಾರ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ (Hosapete) ನಡೆದ ‘ಸಮರ್ಪಣೆ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಡಿಕೆಶಿ, ಎರಡು ವರ್ಷದ ಹಿಂದೆ ಸಿದ್ದರಾಮಯ್ಯ ಮತ್ತು ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿದ್ರಿ. 136 ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್ ಗಾಂಧಿ
ಮೊದಲು ಐದು ಗ್ಯಾರಂಟಿ, ಈಗ ಹಕ್ಕು ಪತ್ರ ಮೂಲಕ ಆರನೇ ಗ್ಯಾರಂಟಿ ನೀಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೆ ಗ್ಯಾರಂಟಿ ಸ್ಕೀಮ್ ನಿಲ್ಲೋದಿಲ್ಲ. ಬಡವರು ಹಕ್ಕು ಪತ್ರ ಇಲ್ಲದೇ ಪರದಾಟ ಮಾಡುವ ಜನರಿಗಾಗಿ ಈ ಕಾರ್ಯಕ್ರಮ. ಈ ಸ್ವತ್ತು ಮೂಲಕ ಏಳನೇ ಗ್ಯಾರಂಟಿ ಕೂಡ ನೀಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಇಂದಿರಾ ಗಾಂಧಿ ಹೊಸಪೇಟೆಯಲ್ಲಿ ಭಾಷಣ ಮಾಡಿದ್ರು. ಸೋನಿಯಾ ಗಾಂಧಿ ಬಿಟಿಪಿಎಸ್ ಘಟಕ ಸ್ಥಾಪನೆ ಮಾಡಿದ್ರು. ಭಾರತ್ ಜೋಡೋ ಯಾತ್ರೆ ಮೂಲಕ ಬಳ್ಳಾರಿ ರಾಹುಲ್ ಗಾಂಧಿ ಸಂಚಾರ ಮಾಡಿದ್ದಾರೆ. ಇದರ ಭಾಗ ಬಳ್ಳಾರಿ ಅಭಿವೃದ್ಧಿ ಹೆಚ್ಚುವರಿ ಹಣ ನೀಡಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಜನರು ಬ್ರ್ಯಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ – ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ
ರಾಜ್ಯದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ತುಂಗಭದ್ರಾ ನದಿ ತೀರದ ನೀರಿನ ಬವಣೆ ತೀರಿಸಲು ಹೊಸ ಅಭಿವೃದ್ಧಿ ಕೆಲಸ ಮಾಡ್ತೇವೆ. ಸಮಾನಾಂತರ ಜಲಾಶಯ ಮಾಡಲು ಅಂಧ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ತಾಂತ್ರಿಕ ತೊಂದರೆ ಸರಿಪಡಿಸಿ ನಿರ್ಮಾಣ ಮಾಡ್ತೇವೆ. ಸರ್ಕಾರದ ಎಲ್ಲಾ ಇಲಾಖೆಯಲ್ಲಿಯೂ ಮಂತ್ರಿಗಳು ಹೊಸ ಯೋಜನೆ ತಂದು ಅಭಿವೃದ್ಧಿ ಮಾಡ್ತಿದ್ದಾರೆ. ಬಸವಣ್ಣನವರ ಮಾತಿನಂತೆ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಮುಂದುವರಿಸಲು ರಾಹುಲ್ ಸಲಹೆ ನೀಡಿದ್ದಾರೆ. ಅದನ್ನ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.