ಬಳ್ಳಾರಿ: ಗೃಹಲಕ್ಷ್ಮಿ ಹಣವನ್ನ ಪ್ರತಿ ತಿಂಗಳೂ… ಕೊಡ್ತೀವಿ ಅಂತ ಹೇಳಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಉಲ್ಟಾ ಹೊಡೆದಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತ ಸುದ್ದಿಗೋಷ್ಠಿಯಲ್ಲಿ, ಗೃಹಲಕ್ಷ್ಮಿ ಹಣ (Gruhalakshmi Scheme Money) ಯಾವಾಗ ಬರುತ್ತೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ನೋಡ್ರಿ ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು.. ನಾವು ದುಡ್ಡು ಕೊಡ್ತಾ ಇರಬೇಕು. ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೇ ಹಣ ಬಂದುಬಿಡುತ್ತಾ? 2, 3, 5 ವರ್ಷ ಆಗುತ್ತೆ ಅಲ್ವಾ.. ಅದೇ ರೀತಿ ಇದೂ ಕೂಡ ಬಂದಾಗ ಬರುತ್ತೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ವಿಪಕ್ಷ ಟೀಕೆ ಕುರಿತು ಮಾತನಾಡಿದ ಅವರು, ನಾನೇನು ಹಂಪಿ ಟೂರ್ ಮಾಡೋಕೆ ಬಂದಿದ್ದೇನಾ? ಕುಮಾರಸ್ವಾಮಿ, ಅಶೋಕ್‌ಗೆ ಟೀಕೆ ಮಾಡದೇ ಇರೋಕೆ ಅಗುತ್ತಾ? ಅಂತ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಕರ್ನೂಲ್ ಬಳಿ ಕಾರು ಅಪಘಾತ – ಪ್ರವಾಸಕ್ಕೆ ತೆರಳಿದ್ದ ತುಮಕೂರಿನ ಮೂವರು ಸಾವು
ಇನ್ನೂ ಗ್ರೇಟರ್ ಬೆಂಗಳೂರು ಮಾಡಿ ರಿಯಲ್ ಎಸ್ಟೇಟ್ ಮಾಫಿಯಾ ಮಾಡ್ತಿದ್ದಾರೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಉತ್ತರಿಸಿ, ನಮ್ಮದು ಕಾಂಗ್ರೆಸ್ ಗ್ಯಾರಂಟಿ, ಅದ್ರೆ ಬಿಜೆಪಿಯದ್ದು ಪಕ್ಷದ ಗ್ಯಾರಂಟಿ ಅಲ್ಲ, ಮೋದಿಯ ಗ್ಯಾರಂಟಿ. ನಮ್ಮ ಗ್ಯಾರಂಟಿಯನ್ನೇ ಬಿಜೆಪಿ ಸರ್ಕಾರದಲ್ಲಿ ಅನುಕರಣೆ ಮಾಡ್ತಿದ್ದಾರೆ. ನರೇಗಾ ಟೀಕೆ ಮಾಡ್ತಿದ್ರು, ಅದನ್ನು ತೆಗೆಯೋಕೆ ಅಗಿದೆಯಾ? ಉಳುವವನೆ ಭೂಮಿಯ ಒಡೆಯ ತೆಗೆಯೋಕೆ ಆಯ್ತಾ? ಟೀಕೆ ಸಾಯ್ತವೆ ಕೆಲಸ ಉಳಿಯುತ್ತವೆ ಎಂದು ಹೇಳಿದರು.
ತೆಲಂಗಾಣ ಸಿಎಂ ಗ್ಯಾರಂಟಿ ಹೊರೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಅವರ ರಾಜ್ಯಕ್ಕೆ ಬಿಟ್ಟ ವಿಚಾರ ಅಂತ ಜಾರಿಕೊಂಡರು. ಇದನ್ನೂ ಓದಿ: Bengaluru Rain | ನಾನು ನಿಮ್ಮಲ್ಲಿ ಒಬ್ಬ, ನಿಮ್ಮೊಂದಿಗೆ ನಿಲ್ಲುತ್ತೇನೆ: ಡಿಕೆಶಿ