ಪಾಕಿಗೆ ಶಾಕ್‌ – ಏಷ್ಯಾಕಪ್‌ನಿಂದ ಹಿಂದೆ ಸರಿದ ಭಾರತ!

Public TV
1 Min Read
Isolate Pakistan BCCI decides to not participate in the upcoming Asia Cup

ಮುಂಬೈ: ಈ ಬಾರಿಯ ಏಷ್ಯಾ ಕಪ್‌ (Asia Cup) ಕ್ರಿಕೆಟ್‌ನಲ್ಲಿ (Crickt) ಭಾರತ ತಂಡ ಭಾಗಿಯಾಗುವುದಿಲ್ಲ ಎಂದು ಬಿಸಿಸಿಐ (BCCI) ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ಗೆ (ACC) ತಿಳಿಸಿದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ ಕ್ರಿಕೆಟ್‌ ಆಯೋಜನೆಗೆ ಎಸಿಸಿ ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲೇ ಬಿಸಿಸಿಐ ತನ್ನ ನಿರ್ಧಾರವನ್ನು ತಿಳಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ. ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಸಿಸಿ ಮುಖ್ಯಸ್ಥರಾಗಿದ್ದಾರೆ. ಇದನ್ನೂ ಓದಿ: RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

Icc champions trophy Team india

ಪಾಕಿಸ್ತಾನದ ಸಚಿವರನ್ನು ಮುಖ್ಯಸ್ಥರನ್ನಾಗಿ ಹೊಂದಿರುವ ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ. ಮುಂಬರುವ ಮಹಿಳಾ ಟೂರ್ನಿಯಲ್ಲೂ ಭಾರತ ಭಾಗಿಯಾಗುವುದಿಲ್ಲ. ಈ ಬಗ್ಗೆ ಮೌಖಿಕವಾಗಿ ನಾವು ತಿಳಿಸಿದ್ದೇವೆ ಎಂದಜು ಬಿಸಿಸಿಐ ಮೂಲಗಳು ತಿಳಿಸಿವೆ.

2023 ರಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಭಾರತ ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿತ್ತು.

ಭಾರತ ಏಷ್ಯಾ ಕಪ್‌ನಿಂದ ಹಿಂದೆ ಸರಿದರೆ ಎಸಿಸಿಗೆ ಭಾರೀ ನಷ್ಟವಾಗಲಿದೆ. ಐಸಿಸಿ, ಎಸಿಸಿಗೆ ಭಾರತದ ಪ್ರಸಾರ ಹಕ್ಕಿನಿಂದಲೇ ಹೆಚ್ಚಿನ ಹಣ ಬರುತ್ತದೆ.

Share This Article