– 2 ದಶಕದಿಂದ KHB ಬಡಾವಣೆ ನಿವಾಸಿಗಳಿಗಿಲ್ಲ ಕಾವೇರಿ
ಮಂಡ್ಯ: ರಾಜಧಾನಿ ಬೆಂಗಳೂರಿನ (Bengaluru) ಜನರಿಗೆ ಕುಡಿಯುವ ನೀರಿನ (Drinking Water) ಸಮಸ್ಯೆ ತಪ್ಪಿಸಲು ರಾಜ್ಯ ಸರ್ಕಾರ ಸಾವಿರಾರು ಕೋಟಿ ವೆಚ್ಚದಲ್ಲಿ ಕಾವೇರಿ 6ನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ.
ಅದೇನೊ ಸರಿ. ಆದ್ರೆ ಮಂಡ್ಯ ಜಿಲ್ಲೆ ಅಂದ್ರೆ ಸರ್ಕಾರಕ್ಕೆ ಅದ್ಯಾಕೆ ನಿರ್ಲಕ್ಷ್ಯವೊ ಗೊತ್ತಿಲ್ಲ. ಕೆಆರ್‌ಎಸ್ ಜಲಾಶಯ (KRS Dam) ಇದ್ರೂ ಮಂಡ್ಯದ ಅದೊಂದು ಬಡಾವಣೆಯ ನಿವಾಸಿಗಳಿಗೆ 2 ದಶಕಗಳಿಂದ ಕಾವೇರಿ ನೀರು ಕೊಡ್ತಿಲ್ಲ. ಇಷ್ಟುದಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿಕೊಂಡು, ಜನಪ್ರತಿನಿಧಿಗಳಿಗೆ ಕೈ ಮುಗಿದು ಸಮಸ್ಯೆ ಬೇಡಿಕೆ ಈಡೇರಿಕೆಗೆ ಮನವಿ ಮಾಡ್ತಿದ್ದ ಜನರು ಇದೀಗ ಪ್ರತಿಭಟನೆ ಹಾದಿ ತುಳಿದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು: ಸಿಎಂ ಇಬ್ರಾಹಿಂ
ಮಂಡ್ಯದಲ್ಲಿ (Mandya) ಕಳೆದ 2 ದಶಕದ ಹಿಂದೆ ಕರ್ನಾಟಕ ಹೌಸಿಂಗ್ ಬೋರ್ಡ್ ಬಡಾವಣೆ ನಿರ್ಮಾಣ ಮಾಡಿ ಅದಕ್ಕೆ ಮಹರಾಜನಗರ ಅಂತ ನಾಮಕರಣ ಮಾಡಿತ್ತು. ಎಲ್ಲಾ ಮೂಲಭೂತ ಸೌಕರ್ಯಗಳನ್ನ ನೀಡ್ತೀವಿ ಅಂತ ಲಕ್ಷ ಲಕ್ಷ ರೂಗಳಿಗೆ ನಿವೇಶನ ಮಾರಾಟ ಮಾಡಿದ್ರು. ಸದಸ್ಯ ಬಡಾವಣೆಯಲ್ಲಿ 300ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು, ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡ್ತಿದ್ದಾರೆ. ಆದ್ರೆ ಈವರೆಗೂ ಇವರಿಗೆ ಕಾವೇರಿ ನೀರು ಸಿಗುತ್ತಿಲ್ಲ. ಇದರಿಂದಾಗಿ ಬೋರ್‌ವೆಲ್‌ಗಳನ್ನೇ ಅವಲಂಬಿಸಿದ್ದಾರೆ. ಆದ್ರೆ ಬೋರ್‌ವೆಲ್‌ಗಳಲ್ಲಿ ಕಲುಷಿತ ನೀರು ಬರ್ತಿರೋದ್ರಿಂದ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಇದನ್ನೂ ಓದಿ: ಅವೈಜ್ಞಾನಿಕ ನೀತಿಯಿಂದ ಅಬಕಾರಿ ಆದಾಯದ ಮೂಲಕ್ಕೆ ಸರ್ಕಾರ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ – ಅಶೋಕ್
ಇನ್ನು 2019ರಲ್ಲಿ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ನಿರ್ವಹಣೆಯನ್ನ ನಗರಸಭೆಗೆ ವಹಿಸಿದೆ. ಆದ್ರೂ ಈವರೆಗೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ನೂರಾರು ಬಾರಿ ಮನವಿ ಮಾಡಿಕೊಂಡ್ರೂ ಸಮಸ್ಯೆ ಬಗೆಹರಿಯದಿದ್ದಕ್ಕೆ ಆಕ್ರೋಶಗೊಂಡ ನಿವಾಸಿಗಳು ಖಾಲಿ ಬಿಂದಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ರು. ಬೆಂಗಳೂರಿಗೆ ನೀರು ಕೊಡಲು ಆಸಕ್ತಿ ತೋರುವ ಸರ್ಕಾರ ನಮ್ಮನ್ನು ಸವತಿ ಮಕ್ಕಳಂತೆ ನೋಡ್ತಿದೆ. ಸರ್ಕಾರಕ್ಕೆ ಮಾನಮರ್ಯಾದೆ ಇದ್ಯಾ? ಕಲುಷಿತ ನೀರು ಕುಡಿದು ನಾವೆಲ್ಲಾ ಸಾಯಬೇಕಾ? ಕಿಡಿಕಾರಿದ್ರು. ಇದನ್ನೂ ಓದಿ: ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ
ಇನ್ನೂ ಮನವಿ ಪತ್ರ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿಗೆ ಫುಲ್ ಕ್ಲಾಸ್ ತೆಗೆದುಕೊಂಡ್ರು. ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಲ್ಲದೆ, ಅಲ್ಲಿಯವರೆಗೂ ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದ್ರು. ಇನ್ನಾದ್ರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆಯನ್ನ ಶಾಶ್ವತವಾಗಿ ಪರಿಹರಿಸುತ್ತಾ ಕಾದುನೋಡಬೇಕಿದೆ.