‘ಲಕ್ಷ್ಮಿ ಬಾರಮ್ಮ’ (Lakshmi Baramma) ನಟ ಶಮಂತ್ ಬ್ರೋ ಗೌಡ (Shamanth Bro Gowda) ಅವರು ಇಂದು (ಮೇ 18) ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ಮೇಘನಾ (Meghana) ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.


ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಶಮಂತ್ ಮೂಲತಃ ಉತ್ತರ ಕರ್ನಾಟಕದವರು. ಶಮಂತ್ ಹಿರೇಮಠ ಅವರ ಪೂರ್ಣ ಹೆಸರು. ಇನ್ನೂ ಮೇಘನಾ ಮರಾಠಿಗರು. ಹೀಗಾಗಿ ಎರಡು ರೀತಿಯ ಪದ್ಧತಿಯಂತೆ ಮದುವೆ ಶಾಸ್ತ್ರಗಳು ನಡೆಯಲಿದೆ.
‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.



