ಕನ್ನಡದ ನಟಿ, ಡಿಜಿಟಲ್ ಕ್ರಿಯೇಟರ್ ದಿಶಾ ಮದನ್ (Disha Madan) ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2025) ಭಾಗಿಯಾಗಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದ್ರೆ, 70 ವರ್ಷಗಳ ಹಿಂದಿನ ಕೆಂಪು ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
ಫ್ರಾನ್ಸ್‌ನಲ್ಲಿ ಅದ್ಧೂರಿಯಾಗಿ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ ಸಿಕ್ಕಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್‌ನಲ್ಲಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಶೋಲ್ಡರ್ ಲೆಸ್ ಬ್ಲೌಸ್‌ಗೆ ಕೆಂಪು ಸೀರೆಯನ್ನು ಡಿಫರೆಂಟ್ ಆಗಿ ಉಟ್ಟಿದ್ದಾರೆ. 70 ವರ್ಷಗಳ ಹಿಂದಿನ ಕಾಂಚಿವರಂ ಸೀರೆಗೆ ನಟಿ ಹೊಸ ರೂಪ ಕೊಟ್ಟಿದ್ದಾರೆ. ಇದನ್ನೂ ಓದಿ:ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು
ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ಇದು ನಡೆಯಲಿದೆ. ಪ್ರತಿದಿನವೂ ಒಂದೊಂದು ಬಗೆಯ ಧಿರಿಸಿನಲ್ಲಿ ನಟಿ ಮಿಂಚಿದ್ದಾರೆ. ವಿದೇಶದಲ್ಲೂ ಸೀರೆಯುಟ್ಟು ಮಿಂಚಿದ್ದಾರೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಪರದೇಶಕ್ಕೆ ಹೋದ್ರು ಭಾರತೀಯ ಸಂಸ್ಕೃತಿ ಮರಿಯದೇ ಸೀರೆಯುಟ್ಟ ನಟಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಕನ್ನಡತಿ ದಿಶಾಗೆ ಈ ಸಿನಿಮಾ ಹಬ್ಬಕ್ಕೆ ಬರಲು ಬಂಪರ್ ಅವಕಾಶ ಸಿಕ್ಕಿದೆ. ಆಹ್ವಾನ ಪತ್ರ ನೀಡಲಾಗಿದೆ. ಈ ಬಗ್ಗೆ ನಟಿ ವಿಡಿಯೋ ಮೂಲಕ ತಿಳಿಸಿದ್ದರು.
View this post on Instagram
ದಿಶಾ ಮದನ್ ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ. ನಟಿಯ 3ನೇ ವರ್ಷ ಹುಟ್ಟುಹಬ್ಬದ ಸಮಯದಲ್ಲಿ ಅವರನ್ನು ಡ್ಯಾನ್ಸ್ ತರಬೇತಿಗೆ ಸೇರಿಸಲಾಯಿತು. ಮೂರು ಗಂಟೆಗೂ ಜಾಸ್ತಿ ನಿರಂತರ ನೃತ್ಯಾಭ್ಯಾಸ ಮಾಡುತ್ತಿದ್ದರು. ಹೀಗೆ ನೃತ್ಯ ಮಾಡಿ ಸುಸ್ತಾಗಿ ಬಂದಾಗ ಅಮ್ಮ ಮುದ್ದು ಮಾಡಿ ಊಟ ಮಾಡಿಸುತ್ತಿದ್ದರು. ರಾಜ್‌ಕುಮಾರ್ ಅವರ ಸಿನಿಮಾಗಳ ಹಾಡನ್ನ ಹಾಡಿ ಮಲಗಿಸುತ್ತಿದ್ದರು. ಭಾನುವಾರ ಬಂದರೆ ಅಜ್ಜ ಬಬ್ರುವಾಹನ ಚಿತ್ರವನ್ನ ಮನೆಯಲ್ಲಿ ಹಾಕುತ್ತಿದ್ದರು. ಹೀಗೆ ಬಾಲ್ಯದಿಂದಲೂ ಸಿನಿಮಾ ಜೀವನದ ಒಂದು ಭಾಗವೇ ಆಗಿದೆ ಎಂದು ನಟಿ ವಿಡಿಯೋದಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬ ನರ್ತಕಿಯಲ್ಲೂ ಒಬ್ಬ ನಟಿ ಇರುತ್ತಾಳೆ. ಹೀಗಾಗಿ ಆಕಸ್ಮಿಕವಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದಾಗಿ ತಿಳಿಸಿದ್ದರು.
View this post on Instagram
ಪ್ರಸ್ತುತ ನಟಿ ದಿಶಾ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮನೋಜ್ಞ ನಟನೆಯಿಂದ ಮನೆ ಮಾತಾಗಿದ್ದಾರೆ.