ಕೊಪ್ಪಳ: ಭಾರತ-ಪಾಕಿಸ್ತಾನ ಉದ್ವಿಗ್ನತೆ ಹಿನ್ನೆಲೆ ನಿರ್ಬಂಧಿಸಲಾಗಿದ್ದ ಟಿಬಿ ಡ್ಯಾಂನಲ್ಲಿ (TB Dam) ಅಧಿಕಾರಿ ಇಇ ಗಿರೀಶ್ ಪುತ್ರನ ನಿಶ್ಚಿತಾರ್ಥ ನೆರವೇರಿಸಿ ನಿಯಮ ಉಲ್ಲಂಘಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧ ಕಾರ್ಮೋಡದ ಹಿನ್ನೆಲೆ ಟಿಬಿ ಡ್ಯಾಂನಲ್ಲಿ ಮೇ 8ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಜೊತೆಗೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೂ ಕೂಡ ಅಧಿಕಾರಿ ಇಇ ಗಿರೀಶ್ ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್‌ನ (Munirabad) ಟಿಬಿ ಡ್ಯಾಂನ ಲೇಕ್ ವ್ಯೂ (Lake View) ಬಳಿ ಇರುವ ವಸತಿ ಗೃಹದಲ್ಲಿ ಮಗನ ನಿಶ್ಚಿತಾರ್ಥ ನೆರವೇರಿಸಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢ ಸಾವು
ಮೇ 10ರಂದು ನಿಶ್ಚಿತಾರ್ಥ ನಡೆದಿದ್ದು, ಶಾಮಿಯಾನ, ಖುರ್ಚಿ ಹಾಕಿ ನೂರಾರು ಜನರಿಗೆ ಹೋಳಿಗೆ ಊಟ ಹಾಕಿಸಿರುವುದಾಗಿ ತಿಳಿದುಬಂದಿದೆ. ಜೊತೆಗೆ ಟಿಬಿ ಡ್ಯಾಂ ಹಿಂಭಾಗಕ್ಕೆ ಹೋಗದಂತೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿತ್ತು. ಚೆಕ್‌ಪೋಸ್ಟ್ ಮೂಲಕ ನೂರಾರು ಜನರು ಹಾದು ಹೋಗಿರುವುದು ತಿಳಿದು ಬಂದಿದೆ.
ಇತ್ತೀಚೆಗೆ ಲೆಕ್‌ವ್ಯೂ ಬಳಿ ಮಾಕ್‌ಡ್ರಿಲ್ ಸಹ ಮಾಡಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ನಿಯಮ ಉಲ್ಲಂಘಿಸಿದ್ದು, ಅಧಿಕಾರಿ ಗಿರೀಶ್ ಮೇಟಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್