– ಕೊತ್ತೂರು ಮಂಜುನಾಥ್‌ಗೆ ಸಿಂಧೂರಕ್ಕೂ ಸಿಂಧೂರಿಗೂ ವ್ಯತ್ಯಾಸವೇ ಗೊತ್ತಿಲ್ಲ: ಮಾಜಿ ಸಂಸದ ಟಾಂಗ್
ಮೈಸೂರು: ಸಂತೋಷ್ ಲಾಡ್ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ. ಹೊರಗಡೆ ಮಾತ್ರ ತಾನು ಬಹಳ ಸಾಚಾ ಅಂತ ಬಿಲ್ಡಪ್ ಕೊಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.
ಕರ್ನಾಟಕದಲ್ಲಿ ಇಬ್ಬರು ಸಚಿವರು ದಿನ ಬೆಳಗಾದರೆ ಕಾಗೆ ಥರ ಕಾಕಾ ಅಂತ ಮಾತಾಡುತ್ತಾರೆ. ಲಾಡ್ ನೀವು ಏನ್ ಮಾತಾಡ್ತಿದ್ದೀರಿ ಅನ್ನೋ ಜ್ಞಾನ ನಿಮಗೆ ಇದ್ಯಾ? ಮೋದಿ ಬಗ್ಗೆ ಮಾತಾಡದೆ ಇದ್ದರೆ ಲಾಡ್‌ಗೆ ತಿಂದಿದ್ದು ಕರಗುವುದಿಲ್ಲ. ಮರಾಠ ಸಮುದಾಯದ ಸಂತೋಷ್ ಲಾಡ್ (Santosh Lad) ಬಾಯಲ್ಲಿ ಶಿವಾಜಿ ರೀತಿ ಮಾತು ಬರುತ್ತಿಲ್ಲ. ಅಬ್ದುಲ್ ಖಾನ್ ರೀತಿ ಮಾತು ಬರುತ್ತಿದೆ. ನೀವೇನೂ ಬಹಳ ಮೇಧಾವಿ ನಾ? ಸಂತೋಷ್ ಲಾಡ್ ಒಬ್ಬ ತಿಳಿಗೇಡಿ. ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿ ಕೇಳ್ರಿ ಅಂತಾರೆ? ಹತ್ಯೆ ಮಾಡಿದವನ ಏನ್‌ಕೌಂಟರ್‌ಗೆ ಮೋದಿ ಅನುಮತಿ ಏಕೆ ಬೇಕು ಲಾಡ್? ಒಂದು ವರ್ಷವಾಯ್ತು ನೇಹಾಗೆ ನ್ಯಾಯ ಕೊಡಿಸಿದ್ರಾ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಸರ್ವಪಕ್ಷ ನಿಯೋಗ – ಕಾಂಗ್ರೆಸ್ ಕೊಟ್ಟ 4 ಹೆಸರು ಬಿಟ್ಟು ಶಶಿ ತರೂರ್ ಆಯ್ಕೆಮಾಡಿದ ಕೇಂದ್ರ!
ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನ್ ಆಯ್ತು? ಮೋದಿಗೆ ಹೇಳಿ ಕೊಡುವಷ್ಟು ನೀವು ಬುದ್ದಿವಂತರಾ? 1971 ರಲ್ಲಿ ಇಂದಿರಾ ಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು. ಅವತ್ತಿನ ಯುದ್ಧದ ಗೆಲುವನ್ನು ಹಾಳು ಮಾಡಿದ್ದು ನಿಮ್ಮ ಇಂದಿರಾ ಗಾಂಧಿ. ಅದು ನೆನಪಿರಲಿ. ಸಂತೋಷ್ ಲಾಡ್ ಕನಿಷ್ಠ ಪರಿಜ್ಞಾನ ಇಟ್ಟುಕೊಂಡು ಮಾತಾಡಿ. ಪಹಲ್ಗಾಮ್‌ನಿಂದ ಕನ್ನಡಿಗರನ್ನು ಕರೆದುಕೊಂಡು ಬರಲು ಅವಕಾಶ ಮಾಡಿಕೊಟ್ಟಿದ್ದು ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ ಲಾಡ್? ನಿಮ್ಮ ಅನಿಷ್ಟಕ್ಕೆಲ್ಲ ಮೋದಿ ಕಾರಣ ಅನ್ನೋ ರೀತಿ ಯಾಕೆ ಮಾತಾಡ್ತೀರಿ? ಪಾಕಿಸ್ತಾನ ಮಾತ್ರ ಶತೃ ಅಲ್ಲ. ನಮ್ಮ ಜೊತೆಯಲ್ಲೇ ಇಂತಹ ಹಿತಶತೃಗಳು ಟೈಂ ಬಾಂಬ್ ಥರ ಇದ್ದಾರೆ. ಸಂತೋಷ್ ಲಾಡ್‌ಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ. ಹೊರಗಡೆ ಮಾತ್ರ ತಾನೂ ಬಹಳ ಸಾಚಾ ಅನ್ನೋ ರೀತಿ ಪೋಸ್ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದ್ರು. ಇಲ್ಲದೆ ಇದ್ದಿದ್ದರೆ ಎರಡನೇ ಬಾರಿ ರಾಜೀನಾಮೆ ಕೊಡಬೇಕಿತ್ತು. ದುಡ್ಡನ ಕೊಬ್ಬಿನಿಂದ ಲಾಡ್ ಮಾತಾಡ್ತಿದ್ದಾರೆ. ನಿಮಗೆ ದುಡ್ಡು ಇರಬಹುದು, ಪತ್ರಕರ್ತರಿಗೆ ನೈತಿಕತೆ ಇದೆ. ನೆನಪಿಟ್ಟುಕೊಳ್ಳಿ ಲಾಡ್. ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ ಎಂದು ಕಿಡಿಕಾರಿದರು.
ಕೊತ್ತೂರು ಮಂಜುನಾಥ್‌ಗೆ (Kottur Manjunath) ಸಿಂಧೂರಕ್ಕೂ ಸಿಂಧೂರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಸಿಂಧೂರ, ಸಿಂಧೂರಿ ಅಂತಾ ಏನೇನೋ ಕಲ್ಪಿಸಿಕೊಂಡು ಕನವರಿಸುತ್ತಿದ್ದಾರೆ. ಮಂಜುನಾಥ್‌ಗೆ ಭೂಮಿಯ ಚದರ ಅಡಿ ಮಾತ್ರ ಗೊತ್ತಿರೋದು. ಒಂದ್ ಸೈಟ್ ನಾಲ್ಕು ಜನಕ್ಕೆ ಮಾರಿ ದುಡ್ಡು ಮಾಡೋದಷ್ಟೆ ಗೊತ್ತು. ಕೊತ್ತೂರು ಮಂಜುನಾಥ್ ನಿಮಗೆ ದೇಶ, ಯುದ್ಧ ಇದೆಲ್ಲ ನಿಮಗೆ ಅರ್ಥವಾಗಲ್ಲ. ಸುಮ್ಮನೆ ಇರಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಪಾಕ್ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?
ಅಂಬೇಡ್ಕರ್ ಅವತ್ತು ಈ ದೇಶದ ಪ್ರಧಾನಿ ಆಗಿದ್ದರೆ, ದೇಶಕ್ಕೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಮರ ಮನಸ್ಥಿತಿ ಅಂಬೇಡ್ಕರ್ ಅವರಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು. ಅಂಬೇಡ್ಕರ್ ಅವರೇ ಮುಸ್ಲಿಮರ ಮನಸ್ಥಿತಿ ಬಗ್ಗೆ ಬಹಳ ಸ್ಪಷ್ಟವಾಗಿ ಅವತ್ತೆ ಹೇಳಿದ್ರು. ಅಂಬೇಡ್ಕರ್ ಅವರ ಫೋಟೋವನ್ನು ಗಾಂಧೀಜಿಯ ಜೊತೆಯಲ್ಲಿ ನೋಟ್‌ನಲ್ಲಿ ಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ. ಬರೀ ಮೀಸಲಾತಿ ದೃಷ್ಟಿಕೋನದಿಂದ ಅಷ್ಟೆ ಅಂಬೇಡ್ಕರ್ ಅವರನ್ನು ನೋಡುವುದ ಬಿಡಿ. ಈಗ ಎಲ್ಲರಿಗೂ ಅಂಬೇಡ್ಕರ್ ಅವರ ವಿಶಾಲ ದೃಷ್ಟಿಕೋನ ಅರ್ಥವಾಗುತ್ತಿದೆ ಎಂದು ತಿಳಿಸಿದರು.