ಬಳ್ಳಾರಿ: ಕೃಷಿಹೊಂಡದಲ್ಲಿ (Agricultural Pit) ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿ (Ballari) ಜಿಲ್ಲೆ ಸಿರುಗುಪ್ಪ (Siruguppa) ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ನಡೆದಿದೆ.
ವೀರೇಶ್ (13) ಮೃತ ಬಾಲಕ. ಕುರಿ ಮೇಯಿಸಿಲು ಹೋಗಿದ್ದ ವೀರೇಶ್ ನೀರು ಕುಡಿಯಲು ಹೋಗಿ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪುಣೆಯ ಐಸಿಸ್ ಮಾಡ್ಯೂಲ್ ಕೇಸ್ – ಇಬ್ಬರು ಉಗ್ರರ ಬಂಧನ
ಸದ್ಯ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾಲಕ ವೀರೇಶ್ ಮೃತದೇಹವನ್ನು ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಖಂಡಾಂತರ ಕ್ಷಿಪಣಿ ದಾಳಿಗೆ ನೂರ್ ಖಾನ್ ವಾಯುನೆಲೆ ಧ್ವಂಸ – ʻಆಪರೇಷನ್ ಸಿಂಧೂರʼದ ಯಶಸ್ಸು ಒಪ್ಪಿಕೊಂಡ ಪಾಕ್ ಪ್ರಧಾನಿ