ಬೆಳಗಾವಿ: ಸಂತಿ ಬಸ್ತವಾಡ ಗ್ರಾಮದ ಕುರಾನ್ (Quran) ಸುಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸ್ಲಿಮರು ನಡೆಸಿದ ಪ್ರತಿಭಟನೆಯಲ್ಲಿ (Protest) ಪೊಲೀಸರ (Police) ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದಾರೆ.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಿಸಿಬಿ ಪಿಐ ಗಡ್ಡೇಕರ್ ಅವರತ್ತ ಚಪ್ಪಲಿ ತೂರಿ ಬಂದಿದೆ. ಇದನ್ನೂ ಓದಿ: 40,000 ಫ್ಯಾನ್ಸ್‌ಗಳಿಂದ ವೈಟ್ ಜೆರ್ಸಿಯಲ್ಲಿ `ಕಿಂಗ್ ಕೊಹ್ಲಿ’ಗೆ ಗೌರವ
ಚಪ್ಪಲಿ ಮೈಮೇಲೆ ಬಿದ್ದರೂ ಬಂದೋಬಸ್ತ್‌ನಲ್ಲಿ ತೊಡಗಿದ್ದ ಗಡ್ಡೇಕರ್ ತಮ್ಮ ಕರ್ತವ್ಯವನ್ನು ಮುಂದುವರೆಸಿದ್ದಾರೆ. ನೂರಾರು ಜನ ಸೇರಿದ ಪ್ರತಿಭಟನಾ ರ‍್ಯಾಲಿಯಲ್ಲಿ ಚಪ್ಪಲಿ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಬೆಳಗಾವಿ ಪೊಲೀಸರು ಆರೋಪಿಗಳ ಬಂಧನಕ್ಕೆ ಮೂರು ದಿನ ಸಮಯ ಕೇಳಿದ್ದರು. ಮೂರು ದಿನವಾದರೂ ಆರೋಪಿಗಳ ಬಂಧಿಸದ ಹಿನ್ನೆಲೆ ಮುಸ್ಲಿಮ್ ಸಮುದಾಯ ಒಗ್ಗಟ್ಟು ಪ್ರದರ್ಶನ ಮಾಡಿ ಪ್ರತಿಭಟಿಸಿತು.