ದೇವರಕೊಂಡ ಸಹೋದರನ ಸಿನಿಮಾಗೆ ಕ್ಲ್ಯಾಪ್- ಶುಭ ಕೋರಿದ ರಶ್ಮಿಕಾ

Public TV
1 Min Read
rashmika mandanna

ನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ (Vaishnavi Chaitanya) ಮತ್ತೆ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ. ‘ಬೇಬಿ’ (Baby) ಜೋಡಿಯ ಹೊಸ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕ್ಲ್ಯಾಪ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ರೆಡ್ಡಿ ಮಗನ ಸಿನಿಮಾದಲ್ಲಿ ಶ್ರೀಲೀಲಾ- 3 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ನಟಿ

rashmika mandanna 1 1ವಿಜಯ್ ದೇವರಕೊಂಡ (Vijay Devarakonda) ಸಹೋದರ ಆನಂದ್ (Anand Devarakonda) ಸಿನಿಮಾಗೆ ರಶ್ಮಿಕಾ ಸಾಥ್ ನೀಡಿದ್ದಾರೆ. ಆನಂದ್ ಮತ್ತು ವೈಷ್ಣವಿ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು (ಮೇ 15) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಿನಿಮಾಗೆ ರಶ್ಮಿಕಾ ಕ್ಲ್ಯಾಪ್ ಮಾಡಿ ಟೀಮ್‌ಗೆ ವಿಶ್ ಮಾಡಿದ್ದಾರೆ.‌ ಇದನ್ನೂ ಓದಿ:ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ

2023ರಲ್ಲಿ ತೆರೆಕಂಡ ‘ಬೇಬಿ’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಮತ್ತೆ ಅದೇ ಜೋಡಿ ಜೊತೆಯಾಗಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ಆದಿತ್ಯ ಹಾಸನ್ ನಿರ್ದೇಶನ ಮಾಡಿದ್ದಾರೆ. ಸಿತಾರಾ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

‘ಬೇಬಿ’ ಚಿತ್ರದ ಮೂಲಕ ತ್ರಿಕೋನ ಪ್ರೇಮಕಥೆ ತೋರಿಸಿದ್ದರು. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಹೊಸ ಸಿನಿಮಾ ಯಾವ ಜಾನರ್ ಕಥೆ ಹೇಳಲು ಹೊರಟಿದ್ದಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

Share This Article