ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ

Public TV
1 Min Read
Pak PM trolled

ಇಸ್ಲಾಮಾಬಾದ್‌: ಪ್ರಧಾನಿ ನರೇಂದ್ರ ಮೋದಿ (PM Modi) ಭಾಷಣಕ್ಕೆ ಟಕ್ಕರ್‌ ಕೊಡಲು ಹೋಗಿ ಮತ್ತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ನಗೆಪಾಟಲಿಗೀಡಾದ್ದಾರೆ. ಧ್ವಂಸಗೊಂಡಿದ್ದ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಸಂವಾದ ನಡೆಸಿ ಟ್ರೋಲ್‌ ಆಗಿದ್ದಾರೆ.

ಭಾರತದ ಅದಂಪುರ ವಾಯುನೆಲೆಯನ್ನು ಧ್ವಂಸಗೊಳಿಸಿದ್ದೇವೆಂದು ಪಾಕ್‌ ಸುಳ್ಳು ಸುದ್ದಿ ಹರಿಬಿಟ್ಟಿತ್ತು. ಅದೇ ಸ್ಥಳಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಮಾತನಾಡಿ ಪ್ರಧಾನಿ ಮೋದಿ ಅವರು ಪಾಕ್‌ಗೆ ತಿರುಗೇಟು ಕೊಟ್ಟಿದ್ದರು. ಈಗ ಭಾರತದ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕರನ್ನು ಪಾಕ್‌ ಪ್ರಧಾನಿ ಭೇಟಿಯಾಗಿದ್ದಾರೆ. ಇದು ಪ್ರಧಾನಿ ಮೋದಿ ಅವರ ನಕಲು ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

ಡ್ಯಾಮೇಜ್ ಆಗಿರುವ ಏರ್‌ಫೀಲ್ಡ್ ಮುಚ್ಚಿಕೊಳ್ಳಲು ಮೈದಾನದಂತಹ ಜಾಗದಲ್ಲಿ ಸೈನಿಕರ ಜೊತೆ ಶೆಹಬಾಜ್‌ ಷರೀಫ್‌ ಸಂವಾದ ನಡೆಸಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸಿ ಸಂವಾದದ ವೀಡಿಯೋ ರಿಲೀಸ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅದಂಪುರ ವಾಯುನೆಲೆಯಲ್ಲಿ ಸೈನಿಕರನ್ನುದ್ದೇಶಿಸಿ ಮಾತಾನಾಡಿ ಜೈಕಾರ ಕೂಗಿದ್ದರು. ಅದನ್ನು ಅನುಕರಿಸಲು ಹೋಗಿ ಪಾಕ್‌ ಪ್ರಧಾನಿ ನಗೆಪಾಟಲಿಗೀಡಾಗಿದ್ದಾರೆ. ಗುಡ್ಡಗಾಡು ಬೆಟ್ಟದ ಮಧ್ಯೆ ಕಾಣುವ ಮೈದಾನದಂತಹ ಜಾಗದಲ್ಲಿ ಪಾಕ್ ಪ್ರಧಾನಿ, ಪಾಕ್‌ನ ಸೇನಾ ಮುಖ್ಯಸ್ಥ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

ಡ್ಯಾಮೇಜ್ ಆಗಿರುವ ಏರ್‌ಪೀಲ್ಡ್‌ನಲ್ಲಿ ಸಂವಾದ ಮಾಡಿದರೆ ಮರ್ಯಾದೆ ಪೂರ್ತಿ ಹೋಗುತ್ತದೆ ಎಂದು ಪಾಕಿಸ್ತಾನ ಈ ಕಸರತ್ತು ಮಾಡಿದೆ.

Share This Article