ರಾಯಚೂರಿನಲ್ಲಿ ವರುಣನ ಆರ್ಭಟ – ಲಕ್ಷಾಂತರ ರೂ.ಮೌಲ್ಯದ ಭತ್ತ ನಾಶ

Public TV
1 Min Read
Raichuru Rain

ರಾಯಚೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಲಕ್ಷಾಂತರ ರೂಪಾಯಿ ಭತ್ತ ನಾಶವಾಗಿರುವ ಘಟನೆ ಸಿಂಧನೂರು (Sindhanuru) ತಾಲೂಕಿನಲ್ಲಿ ನಡೆದಿದೆ.ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

ವರುಣನ ಅಬ್ಬರಕ್ಕೆ ಜಮೀನುಗಳಲ್ಲಿ ಒಣಗಲು ಹಾಕಿದ್ದ ಭತ್ತದ ರಾಶಿ ಕೊಚ್ಚಿಕೊಂಡು ಹೋಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಇದರಿಂದಾಗಿ ಭತ್ತಕ್ಕೆ ಉತ್ತಮ ಬೆಲೆಯಿಲ್ಲದೆ, ಮಾರಾಟಕ್ಕಾಗಿ ಕಾಯುತ್ತಿದ್ದ ರೈತರಿಗೆ ಭಾರೀ ನಷ್ಟವಾಗಿದೆ.

ಸಿಂಧನೂರು ತಾಲೂಕಿನ ಸುಲ್ತಾನಪುರ, ಜಂಗಮರಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ರೈತರು ಕಂಗಾಲಾಗಿದ್ದು, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು, ವೈಜ್ಞಾನಿಕ ಬೆಲೆ ಘೋಷಿಸಿ ಭತ್ತ ಖರೀದಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

Share This Article