ಬೆಂಗಳೂರು: 108 ಅಂಬುಲೆನ್ಸ್ ಸೇವೆಯನ್ನು (108 Ambulence Service) ಇನ್ನು ಮುಂದೆ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, 108 ಅಂಬುಲೆನ್ಸ್ ಸೇವೆ ಇನ್ನು ಮುಂದೆ ಸರ್ಕಾರವೇ ನಿರ್ವಹಣೆ ಮಾಡಲಿದೆ. ಖಾಸಗಿ ಅವರಿಂದ ನಾವು ಹೊರಗೆ ಬರುವ ತೀರ್ಮಾನ ಮಾಡಿದ್ದೇವೆ. ಖಾಸಗಿ ಅವರಿಗೆ ಕೊಡುವ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆ ಆಗುತ್ತಿತ್ತು. ಹೀಗಾಗಿ ನಾವೇ ಇದನ್ನು ನಿರ್ವಹಣೆ ಮಾಡಲು ನಿರ್ಧಾರ ಮಾಡಿದ್ದೇವೆ. ನಾವೇ ನಿರ್ವಹಣೆ ಮಾಡಿದರೆ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತದೆ ಎಂದರು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷನಾಗಿ ರೌಡಿಶೀಟರ್ ನೇಮಕ – ನಾನು ಶಿಫಾರಸು ಪತ್ರ ಕೊಟ್ಟಿಲ್ಲ: ದಿನೇಶ್ ಗುಂಡೂರಾವ್
ಈಗಾಗಲೇ ಚಾಮರಾಜನಗರದಲ್ಲಿ ಟ್ರಯಲ್ ಆಗಿದೆ. ರಾಜ್ಯದ ಅಂಬುಲೆನ್ಸ್ ವ್ಯವಸ್ಥೆಯನ್ನು ಈಗಾಗಲೇ ಸರ್ಕಾರ ನಿರ್ವಹಣೆ ಮಾಡಲು ಪ್ರಕ್ರಿಯೆ ಶುರು ಮಾಡಿದೆ. ಅದರಂತೆ 108 ಅನ್ನು ಸರ್ಕಾರವೇ ನಿರ್ವಹಣೆ ಮಾಡಲಿದೆ. 2-3 ತಿಂಗಳಲ್ಲಿ ಈ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಮಗ್ರ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆ: ದಿನೇಶ್ ಗುಂಡೂರಾವ್