‘ಬುಲ್ ಬುಲ್’ ಬೆಡಗಿ ರಚಿತಾ ರಾಮ್ (Rachita Ram) ಅವರು ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟು 12 ವರ್ಷಗಳು ಕಳೆದಿವೆ. ಹಲವಾರು ಪಾತ್ರಗಳಿಂದ ರಂಜಿಸಿ ಮನಗೆದ್ದಿರೋ ನಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ
ಪ್ರಸ್ತುತ ರಚಿತಾ ರಾಮ್ ಅವರು ಜೀ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ ಜಡ್ಜ್ ಆಗಿದ್ದಾರೆ. ಶೋನಲ್ಲಿ ರವಿಚಂದ್ರನ್ ಜೊತೆ ರಚಿತಾ ಕೂಡ ಮುಂದಾಳತ್ವ ವಹಿಸಿದ್ದಾರೆ. ಈ ವೇದಿಕೆಯಲ್ಲಿ ರಚಿತಾ ಸಿನಿಮಾ ಜರ್ನಿಯ ಕೊಡುಗೆ ಬಗ್ಗೆ ರವಿಚಂದ್ರನ್ ಕೊಂಡಾಡಿದ್ದಾರೆ. ಈ ವೇಳೆ, ರಚಿತಾಗೆ ದರ್ಶನ್ ಕಳುಹಿಸಿರುವ ಸಂದೇಶ ವೇದಿಕೆಯಲ್ಲಿ ಪ್ಲೇ ಮಾಡಿದ್ದಾರೆ. ನಮ್ಮ ‘ಬುಲ್ ಬುಲ್’ ಎಲ್ಲರನ್ನು ಹೀಗೆ ರಂಜಿಸಲಿ ಎಂದು ಮನಸಾರೆ ಹಾರೈಸಿದ್ದಾರೆ. ಆಗ ದರ್ಶನ್ ವಾಯ್ಸ್ ಕೇಳ್ತಿದ್ದಂತೆ ರಚಿತಾ ರಾಮ್ ಭಾವುಕರಾಗಿದ್ದಾರೆ.
View this post on Instagram
ದರ್ಶನ್‌ಗೆ ಜೋಡಿಯಾಗಿ ಸಿನಿಮಾ ರಂಗಕ್ಕೆ ‘ಬುಲ್ ಬುಲ್’ (Bul Bul) ಮೂಲಕ ಎಂಟ್ರಿ ಕೊಟ್ಟರು. ಹೀಗಾಗಿ ದರ್ಶನ್ ಮೇಲೆ ರಚಿತಾಗೆ ಅಪಾರ ಅಭಿಮಾನ ಮತ್ತು ಗೌರವವಿದೆ. ʼಭರ್ಜರಿ ಬ್ಯಾಚುಲರ್ಸ್’ ತಂಡದ ಸರ್ಪ್ರೈಸ್ ಮತ್ತು ದರ್ಶನ್ ಹಾರೈಕೆ ನಟಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ- ಡೇಟಿಂಗ್ ಬಗ್ಗೆ ಹಿಂಟ್ ಕೊಟ್ರಾ ಈ ಜೋಡಿ?
ಚಿತ್ರರಂಗಕ್ಕೆ ಬಂದು 12 ವರ್ಷವಾದ್ರೂ ಇಂದಿಗೂ ಚಾರ್ಮ್ ಉಳಿಸಿಕೊಂಡಿರುವ ರಚಿತಾಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ. ಹೀಗೆ ಮತ್ತಷ್ಟು ಸಿನಿಮಾಗಳ ಮೂಲಕ ರಂಜಿಸಲಿ ಎಂಬುದು ಅಭಿಮಾನಿಗಳ ಆಶಯ.