ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯ ಬಗ್ಗೆ ಈಗಾಗಲೇ ಚಿತ್ರರಂಗದ ಅನೇಕ ತಾರೆಯರು ಹೊಗಳಿದ್ದಾರೆ. ಇದೀಗ ತಡವಾಗಿ ಆಮೀರ್ ಖಾನ್ (Aamir Khan) ರಿಯಾಕ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಜೊತೆಗಿನ ಹಸಿಬಿಸಿ ಪ್ರಣಯದ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ನಿಕ್ಕಿ
ಆಮೀರ್ ಖಾನ್ ಪ್ರೊಡಕ್ಷನ್ಸ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ‘ಆಪರೇಷನ್ ಸಿಂಧೂರ’ ವೀರರಿಗೆ ನಮಸ್ಕಾರಗಳು. ನಮ್ಮ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ಅಚಲ ಬದ್ಧತೆಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ಭದ್ರತೆಗಾಗಿ ಧನ್ಯವಾದಗಳು. ‘ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.
View this post on Instagram
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಗ್ಗೆ ತಡವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಕ್ಕೆ, ಈಗ ನಿದ್ದೆಯಿಂದ ಎಚ್ಚರ ಆದ್ರಾ ಎಂದು ಆಮೀರ್ ಕಾಲೆಳೆದಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ರಿ ಎಂದು ನೆಟ್ಟಿಗರು ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ
ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಪ್ರವಾಸಿಗರು ಬಲಿಯಾಗಿದ್ದರು. ಈ ಹಿನ್ನೆಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಪಾಕ್‌ಗೆ ಭಾರತೀಯ ಸೇನೆ ಪಾಠ ಕಲಿಸಿದೆ.