‘ಬಿಗ್ ಬಾಸ್’ ಬೆಡಗಿ ಗೌತಮಿ ಜಾಧವ್ (Gouthami Jadav) ದೊಡ್ಮನೆ ಆಟ ಮುಗಿದ್ಮೇಲೆ ಅದ್ಯಾವ ಪ್ರಾಜೆಕ್ಟ್ ಮೂಲಕ ಬರುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಲೇಡಿ ಪೊಲೀಸ್ ಆಫೀಸರ್ ಸಿಂಧೂರಿಯಾಗಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್
‘ಸತ್ಯ’ ಸೀರಿಯಲ್, ‘ಬಿಗ್ ಬಾಸ್ ಕನ್ನಡ 11’ರ ಶೋ ಮುಗಿದ ಬಳಿಕ ಸಿನಿಮಾ ಅಥವಾ ಸೀರಿಯಲ್ ಬಗ್ಗೆ ಅಪ್‌ಡೇಟ್ ಸಿಕ್ಕಿರಲಿಲ್ಲ. ಈಗ ‘ಭಾರ್ಗವಿ LLB’ ಸೀರಿಯಲ್ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸೀರಿಯಲ್‌ನಲ್ಲಿ ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ನಾಯಕಿ ಭಾರ್ಗವಿಯ ರಕ್ಷಣೆಗೆ ಬರುವ ಸಿಂಧೂರಿ ಪಾತ್ರದಲ್ಲಿ ಗೌತಮಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ
ಈ ಸೀರಿಯಲ್‌ನಲ್ಲಿ ಖಡಕ್ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಟ್ಟಿದ್ದಾರೆ. ನಾನು ಎಲ್ಲಿ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ ಎಂದು ಅವರು ವಿಲನ್‌ಗಳಿಗೆ ಸಖತ್ ಮಾಸ್ ಆಗಿ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಡೈಲಾಗ್ ಕೇಳಿದ್ರೆ ಅಭಿಮಾನಿಗಳಿಗೆ ‘ಸತ್ಯ’ ಸೀರಿಯಲ್‌ನ ಸತ್ಯಳ ಪಾತ್ರವನ್ನೇ ನೆನಪಿಸುವಂತೆ ಮಾಡಿದೆ. ಆದರೆ ಈ ಪಾತ್ರದಲ್ಲಿ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಒಟ್ನಲ್ಲಿ ಗೌತಮಿ ಹೊಸ ಪಾತ್ರ, ಹೊಸ ಅವತಾರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.