ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

Public TV
2 Min Read
yogaraj bhat rakesh poojari

‘ಕಾಡಿಮಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojari) ಅವರ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಸಂತಾಪ ಸೂಚಿಸಿದ್ದಾರೆ. ಅವನ ಅಕಾಲಿಕ ಮರಣ ತುಂಬಾ ನೋವು ತಂದಿದೆ ಎಂದು ಕಂಬಿನಿ ಮಿಡಿದಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

Rakesh Poojari

‘ಕಾಮಿಡಿ ಕಿಲಾಡಿಗಳು 3’ರ ತೀರ್ಪುಗಾರರಾಗಿದ್ದ ಯೋಗರಾಜ್ ಭಟ್ ಅವರು ರಾಕೇಶ್ ಜೊತೆಗಿನ ಒಡನಾಟದ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾತನಾಡಿ, ರಾಕೇಶ್ ನಟನೆಯನ್ನು ಹತ್ತಿರದಿಂದ ನೋಡಿದ್ದೇವೆ. ಅವರ ಸಾವಿನ ಸುದ್ದಿ ಕೇಳಿದಾಗ ಅದನ್ನು ಅರಗಿಸಿಕೊಳ್ಳೋಕೆ ಅರ್ಧ ಗಂಟೆ ಬೇಕಾಯಿತು. ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದಿರೋ ವ್ಯಕ್ತಿ. ಕರಾವಳಿಯಿಂದ ಬಂದಂತಹ ಅಪ್ರತಿಮ ಕಲಾವಿದ. ನಮ್ಮ ಸೆಟ್‌ನಲ್ಲಿ ಅವರನ್ನು ಮುದ್ದಿನ ನಟನಾಗಿ ಆರೈಕೆ ಮಾಡುತ್ತಿದ್ವಿ. ಅವರ ಮೇಲೆ ವಿಶೇಷ ಅಕ್ಕರೆ ಇತ್ತು. ‘ಕಾಮಿಡಿ ಕಿಲಾಡಿಗಳು’ ಗೆದ್ದಾಗ ಖುಷಿಪಟ್ಟಿದ್ದ ಎಂದಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

Rakesh Poojari 2ನನ್ನ ನಿರ್ದೇಶನದ ‘ಮನದ ಕಡಲು’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ‘ಕಾಂತಾರ ಚಾಪ್ಟರ್ 1’ರಲ್ಲಿ ನಟಿಸುತ್ತಿದ್ದ ಕಾರಣ ನನ್ನ ಚಿತ್ರದಲ್ಲಿ ನಟಿಸೋಕೆ ಆಗಲಿಲ್ಲ. ಈ ಚಿತ್ರದಲ್ಲಿ ಅವನಿಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದಕ್ಕಾಗಿ ಗಡ್ಡ ಬಿಟ್ಟಿದ್ದ ಹೀಗಾಗಿ ಈ ಸಿನಿಮಾ ಮುಗಿಸು ಮುಂದಿನ ಚಿತ್ರದಲ್ಲಿ ಕೆಲಸ ಮಾಡೋಣ ಅಂದಿದ್ದೇ. ಈ ಹಿಂದೆ ‘ಕರಟಕ ದಮನಕ’ ಚಿತ್ರದಲ್ಲಿ ಒಂದು ದಿನದ ಖೈದಿ ಪಾತ್ರ ಮಾಡಿದ್ದ ಎಂದು ನಟನನ್ನು ಸ್ಮರಿಸಿದರು.

yogaraj bhatರಾಕೇಶ್ ಅಕಾಲಿಕ ಮರಣ ತುಂಬಾ ನೋವು ತಂದಿದೆ. ಅವನಿಗೆ ತುಂಬಾ ಕನಸುಗಳಿತ್ತು. ಯಾವುದೇ ಬೆಂಬಲವಿಲ್ಲದೇ, ಚಿತ್ರರಂಗಕ್ಕೆ ಸ್ವಂತ ಪ್ರತಿಭೆಯಿಂದ ಬಂದವನು. ಸಿನಿಮಾಗಳು ಮಾಡಬೇಕು ಎಂದು ಅವನಿಗೆ ಕನಸಿತ್ತು. ವಯಸ್ಸಾದ ಪಾತ್ರ ಮಾಡಬೇಕು ಎಂದು ಆಸೆ ಹೇಳಿಕೊಂಡಿದ್ದ ಈಗ ಅವನ ಬಗ್ಗೆ ಯೋಚನೆ ಮಾಡಿದ್ರೆ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ. ಈ ವೇಳೆ, ಉಡುಪಿಯ ಹೂಡೆ ಸ್ಥಳದಲ್ಲಿ ರಾಕೇಶ್ ಅಂತ್ಯಕ್ರಿಯೆ ನಡೆಯಲಿದೆ. ತಾವು ಕೂಡ ಭಾಗಿಯಾಗಿರೋದಾಗಿ ಯೋಗರಾಜ್ ಭಟ್ ತಿಳಿಸಿದ್ದಾರೆ.

ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Share This Article