ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ

Public TV
2 Min Read
divyashree

ಟ ರಾಕೇಶ್ ಪೂಜಾರಿ ನಿಧನರಾಗಿರುವ ಬಗ್ಗೆ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ದಿವ್ಯಾಶ್ರೀ (Divyashree) ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಒಳ್ಳೆಯ ಕಲಾವಿದರು ಸಿಕ್ತಾರೆ, ಆದರೆ ಒಳ್ಳೆಯ ವ್ಯಕ್ತಿಯನ್ನ ನೋಡೋದು ಕಡಿಮೆ ಎನ್ನುತ್ತಾ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಕುಟುಂಬ ಸಮೇತ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಉಪೇಂದ್ರ

Rakesh Poojari

ರಾಕೇಶ್ ಪೂಜಾರಿ ಮತ್ತು ನಟಿ ದಿವ್ಯಾ ಹಲವು ವರ್ಷಗಳಿಂದ ಪರಿಚಿತರು. ಹೀಗಾಗಿ ಅವರೊಂದಿನ ಒಡನಾಟದ ಬಗ್ಗೆ ಮತ್ತು ಅವರ ನಿಧನ ಸುದ್ದಿ ತಮಗೆ ತಿಳಿದಿದ್ದು ಹೇಗೆ ಎಂದು ನಟಿ ‘ಪಬ್ಲಿಕ್ ಟಿವಿ’ಗೆ ವಿವರಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ನಟ ಸದಾನಂದ ಕಡೆಯಿಂದ ಬೆಳಗ್ಗೆ 5.30ಕ್ಕೆ ರಾಕೇಶ್ ಸಾವಿನ ಸುದ್ದಿ ತಿಳಿಯಿತು. ಈ ವಿಷ್ಯ ಕೇಳಿದಾಗ ಮೊದಲಿಗೆ ಸುಳ್ಳು ಸುದ್ದಿ ಅಂದುಕೊಂಡಿದ್ವಿ, ಆ ನಂತರ ಖಾತ್ರಿಯಾಯಿತು ಅಂತ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್ ಪೂಜಾರಿ

divyashree

ಇತ್ತೀಚೆಗೆ ‘ದಸ್ಕತ್’ ಅಂತ ತುಳು ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ ನಮ್ಮೊಂದಿಗೆ ಕುಳಿತು ಸಿನಿಮಾ ನೋಡಿದ್ದರು. ಸದಾ ಎಲ್ಲರನ್ನು ನಗಿಸುತ್ತಿದ್ದರು. ಅವರಿಗೆ 33 ವರ್ಷ ವಯಸ್ಸು ಆಗಿದ್ರು. ಅವರಲ್ಲಿ ಮಗುವಿನಂತ ಗುಣವಿತ್ತು ಎಂದಿದ್ದಾರೆ. `ದಸ್ಕತ್’ ಸಿನಿಮಾ ಪ್ರದರ್ಶನದಲ್ಲಿ ಕಡೆಯ ಬಾರಿ ಭೇಟಿಯಾಗಿದ್ದು ಅಂತ ಹೇಳಿಕೊಂಡಿದ್ದಾರೆ.

Rakesh Poojari 2

ರಾಕೇಶ್‌ಗೆ ಆರೋಗ್ಯ ಸಮಸ್ಯೆ ಇತ್ತಾ ಗೊತ್ತಿಲ್ಲ. ಕಲಾವಿದರಿಗೆ ಬೆಳಗ್ಗೆಯಿಂದ ರಾತ್ರಿಯವರೆಗೆ ಶೂಟ್ ಇರುತ್ತದೆ. ಊಟ ನಿದ್ರೆ ಸಮಸ್ಯೆ ಇರುತ್ತದೆ. ಹೀಗಾಗಿ ಲೋ ಬಿಪಿ ಆಗಿರಬಹುದು. ಕಷ್ಟ ಆದರೂ ಇಷ್ಟಪಟ್ಟು ಕೆಲಸ ಮಾಡುತ್ತೇವೆ. ಅವರಿಗೆ ಮದುವೆ ವಿಚಾರದಲ್ಲಿ ನಾವು ರೇಗಿಸುತ್ತಿದ್ದೇವು. ರಾಕೇಶ್‌ಗೆ ಅಪ್ಪ ಇಲ್ಲ ಆದರೆ ತಂಗಿ, ಅಮ್ಮ ಇದ್ದಾರೆ. ಅವರು ಅದಷ್ಟೇ ತಮಾಷೆ ಮಾಡಿಕೊಂಡು ಇದ್ದರು. ಜೀವನದಲ್ಲಿ ಅವರಿಗೆ ಸೀರಿಯಸ್‌ನೆಸ್ ಇತ್ತು. ತಂಗಿ ಮದುವೆ ಮಾಡಬೇಕು ಎಂದಿತ್ತು. ತಂಗಿಗೆ ಮದುವೆ ಮಾಡಿದ್ಮೇಲೆ ನಾನು ಮದುವೆ ಆಗುತ್ತೇನೆ ಎಂದಿದ್ದರು. ನನಗೆ ಅವರ ಅಮ್ಮನದ್ದೇ ಯೋಚನೆ ಆಗ್ತಿದೆ. ಅವರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅವರನ್ನು ಇಷ್ಟಪಡದೇ ಇರುವವರು ಯಾರಿಲ್ಲ. ಒಳ್ಳೆಯ ಕಲಾವಿದರನ್ನು ನೋಡಿದ್ದೇವೆ. ಆದರೆ ಒಳ್ಳೆಯ ವ್ಯಕ್ತಿ ಸಿಗೋದು ಕಡಿಮೆ ಅಲ್ವಾ ಎಂದಿದ್ದಾರೆ. ರಕ್ಷಿತಾ ಪ್ರೇಮ್ ಮೇಡಂಗೆ ರಾಕೇಶ್ ಫೇವರೇಟ್. ಈಗ ಅವರು ಇಲ್ಲ ಅಂತ ಬೇಜಾರು ಎನ್ನುತ್ತಾ ನಟಿ ಭಾವುಕರಾಗಿದ್ದಾರೆ.

rakesh pooojary rakshitha

ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Share This Article