ಕನ್ನಡದ ನಟಿ ಶ್ರೀಲೀಲಾ ಇದೀಗ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಕಿಸಿಕ್ ಹಾಡಿಗೆ ಸೊಂಟ ಬಳುಕಿಸಿದ್ಮೇಲೆ ಬಾಲಿವುಡ್ ಮಂದಿ ಕನ್ನಡದ ಈ ನಟಿಗೆ ಮಣೆ ಹಾಕಿದ್ದಾರೆ. ಕರಣ್ ಜೋಹರ್ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸಬೇಕಿದ್ದ ಪಾತ್ರಕ್ಕೆ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮೂವತ್ತೇ ಸೆಕೆಂಡುಗಳಲ್ಲಿ ಕಲಾ ಲೋಕ ಸೃಷ್ಟಿಸಿದ ನಟಿ ರಿಮಾ ಕಲ್ಲಿಂಗಲ್, ಪದ್ಮಪ್ರಿಯಾ!
ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಇದೀಗ ‘ದೋಸ್ತಾನ 2’ ಸಿನಿಮಾ ಮಾಡಲು ಮುಂದಾಗಿದೆ. ಇದಕ್ಕೆ ವಿಕ್ರಾಂತ್ ಮಾಸ್ಸಿ ನಾಯಕಿನಾಗಿ ನಟಿಸಲಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸಲು ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಿದ್ದರು. ಕಾರಣಾಂತರಗಳಿಂದ ಜಾನ್ವಿ ನಟಿಸಬೇಕಿದ್ದ ಜಾಗಕ್ಕೆ ಶ್ರೀಲೀಲಾ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್
ವಿಕ್ರಾಂತ್ ಮತ್ತು ಶ್ರೀಲೀಲಾ ಜೋಡಿಯ ಮೂಲಕ ‘ದೋಸ್ತಾನ 2’ (Dostana 2) ಚಿತ್ರದಲ್ಲಿ ವಿಭಿನ್ನ ಪ್ರೇಮಕಥೆಯನ್ನು ಹೇಳೋಕೆ ರೆಡಿಯಾಗಿದ್ದಾರೆ. ಕನ್ನಡದ ನಟಿಯ ಮೇಲಿರುವ ಪಡ್ಡೆಹುಡುಗರ ಕ್ರೇಜ್ ನೋಡಿ ಅವರಿಗೆ ನಟಿಸಲು ಆಫರ್ ನೀಡಲಾಗಿದೆ.
2008ರಲ್ಲಿ ‘ದೋಸ್ತಾನ’ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಪ್ರಿಯಾಂಕಾ ಚೋಪ್ರಾ, ಅಭಿಷೇಕ್ ಬಚ್ಚನ್ ನಟಿಸಿದ್ದರು. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸಿದ್ದರು. ಇದೀಗ ಮತ್ತೆ ಸಿನಿಮಾ ಇದರ ಪಾರ್ಟ್ 2 ಮೂಲಕ ಹೊಸ ಜೋಡಿಯನ್ನು ಪರಿಚಯಿಸಲು ಮುಂದಾಗಿದೆ.
ಅಂದಹಾಗೆ, ಕಾರ್ತಿಕ್ ಆರ್ಯನ್ ಜೊತೆ ‘ಆಶಿಕಿ-3’, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಜೋಡಿಯಾಗಿ ಹೊಸ ಸಿನಿಮಾದಲ್ಲಿ ಶ್ರೀಲೀಲಾ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗಳು ರಿಲೀಸ್ ಆಗುವ ಮುನ್ನವೇ ಅವರಿಗೆ ಬಾಲಿವುಡ್‌ನಲ್ಲಿ ಬಂಪರ್ ಆಫರ್‌ಗಳು ಬರುತ್ತಿವೆ.