ಬ್ರಹ್ಮೋಸ್‌ ದಾಳಿಗೆ ಬೆಚ್ಚಿ ಗೋಗರೆದು ಕದನ ವಿರಾಮ ಮಾಡಿಸಿದ್ದ ಪಾಕ್‌!

Public TV
2 Min Read
Sargodha Base Pakistan

ನವದೆಹಲಿ: ಭಾರತದ (India) ಬ್ರಹ್ಮೋಸ್‌ ಕ್ಷಿಪಣಿ (Brahmos Missile) ದಾಳಿಗೆ ಬೆದರಿದ ಪಾಕಿಸ್ತಾನ (Pakistan) ಗೋಗರೆದು ಕದನ ವಿರಾಮ ಮಾಡಿಸಿತ್ತು ಎಂಬ ವಿಚಾರ ಈಗ ಸರ್ಕಾರಿ ಮೂಲಗಳಿಂದ ತಿಳಿದು ಬಂದಿದೆ.

ಭಾರತದ ಉಗ್ರರ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಆರಂಭದಲ್ಲಿ ಡ್ರೋನ್‌, ಸಣ್ಣ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸುತ್ತಿತ್ತು. ಆದರೆ ಮೇ 9, 10 ರ ರಾತ್ರಿ ದೆಹಲಿಯನ್ನು ಗುರಿಯಾಗಿಸಿ ಪಾಕ್‌ ಫತಾಹ್-II ಕ್ಷಿಪಣಿಯನ್ನು ಪಾಕ್‌ ಪ್ರಯೋಗಿಸಿತ್ತು. ಪಾಕ್‌ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದ ಬೆನ್ನಲ್ಲೇ ಭಾರತ ಮೇ 10ರ ಮುಂಜಾನೆ ಮೊದಲ ಬಾರಿಗೆ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯನ್ನು ಹಾರಿಸಿತ್ತು. ಇನ್ನೊಂದು ದೇಶದ ಮಧ್ಯೆ ಕಾದಾಟ ನಡೆಸುತ್ತಿದ್ದಾಗ ಭಾರತ ಬ್ರಹ್ಮೋಸ್‌ ಕ್ಷಿಪಣಿಯನ್ನು ಹಾರಿಸಿದ್ದು ಇದೇ ಮೊದಲು.

BrahMos Missile

ನಗರಗಳನ್ನು ಗುರಿಯಾಗಿಸಿ ಭಾರತ ಕ್ಷಿಪಣಿಯನ್ನು ಹಾರಿಸಿರಲಿಲ್ಲ. ಪಾಕಿಸ್ತಾನದ ಪ್ರಮುಖ ವಾಯುನೆಲೆಯನ್ನು (Air Base) ಗುರಿಯಾಗಿಸಿಕೊಂಡೇ ದಾಳಿ ನಡೆಸಿತ್ತು. ಭಾರತ ಮೊದಲೇ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿತ್ತು. ಹೀಗಾಗಿ ಬಹ್ಮೋಸ್‌ ಕ್ಷಿಪಣಿ ಮೊದಲು ರಾವಲ್ಪಿಂಡಿ ಬಳಿಯ ಚಕ್ಲಾಲಾ ಮತ್ತು ಪಂಜಾಬ್ ಪ್ರಾಂತ್ಯದ ಸರ್ಗೋಧಾದ ಮೇಲೆ ಬಿತ್ತು. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದ ಪಾಕ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಹರ್ಯಾಣದಲ್ಲೇ ಛಿದ್ರ!

ಪಾಕಿಸ್ತಾನದ ದಾಳಿ ನಡೆಸುವ ಮೂಲಕ ಲಾಜಿಸ್ಟಿಕ್ಸ್‌ ಸಂಗ್ರಹ ಇರುವ ಈ ನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಪಾಕ್‌ ಈ ದಾಳಿಯ ಬಗ್ಗೆ ಪಾಕ್‌ ವಿಶ್ಲೇಷಣೆ ನಡೆಸುತ್ತಿದ್ದಾಗಲೇ ಭಾರತ ಜಕೋಬಾಬಾದ್, ಭೋಲಾರಿ ಮತ್ತು ಸ್ಕಾರ್ಡು ಮೇಲೆ ದಾಳಿ ನಡೆಸಿತು. ಎಲ್ಲಾ ಸೇರಿ ಒಟ್ಟು 11 ವಾಯು ನೆಲೆ (ನೂರ್ ಖಾನ್/ಚಕ್ಲಾಲಾ, ರಫಿಕ್ವಿ, ಮುರಿಡ್, ಸುಕ್ಕುರ್, ಸಿಯಾಲ್‌ಕೋಟ್‌, ಪಸರೂರು, ಚುನಿಯನ್, ಸರ್ಗೋಧಾ, ಸ್ಕಾರ್ಡು, ಭೋಲಾರಿ, ಜಾಕೋಬಾಬಾದ್) ಮೇಲೆ ಭಾರತ ದಾಳಿ ನಡೆಸಿತ್ತು. ದಾಳಿಯಿಂದ ಎಷ್ಟು ಪ್ರಮಾಣದ ಹಾನಿಯಾಗಿದೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಕೆಲವು ಕಡೆ ರನ್‌ವೇ ಹಾಳಾಗಿದ್ದಾರೆ ಕೆಲವು ಕಡೆ ವಿಮಾನಗಳು ತಂಗಿದ್ದ ಶೆಡ್‌ ಮೇಲೆಯೇ ಡ್ರೋನ್‌/ ಕ್ಷಿಪಣಿಯನ್ನು ಹಾಕಿತ್ತು.

GqlVn4SXIAA2Z1d

ಮುಖ್ಯವಾಗಿ ಸರ್ಗೋಧಾ ವಾಯುನೆಲೆ (Sargodha Base) ಪಾಕಿಸ್ತಾನದ ಶಕ್ತಿಶಾಲಿ ವಾಯು ನೆಲೆಯಾಗಿದ್ದು ಭಾರತದ ವಿರುದ್ಧ ದಾಳಿ ಮಾಡುವ ಎಫ್‌16 ವಿಮಾನಗಳು ಇಲ್ಲಿಂದಲೇ ಟೇಕಾಫ್‌ ಆಗುತ್ತಿದ್ದವು. ಈ ನೆಲೆಯ ಮೇಲಿನ ದಾಳಿಯಿಂದ ಪಾಕ್‌ ಬೆಚ್ಚಿ ಬಿದ್ದಿತ್ತು. ಈ ಜಾಗವನ್ನು ಉಪಗ್ರಹದ ಮೂಲಕ ನೋಡಿದಾಗ ರನ್‌ವೇಯಲ್ಲಿ ದೊಡ್ಡ ಕುಳಿ ಬಿದ್ದಿರುವುದು ನೋಡಬಹುದು.

ಈ ಸಮಯದಲ್ಲಿಯೇ ಪಾಕಿಸ್ತಾನ ತುರ್ತು ಹಸ್ತಕ್ಷೇಪಕ್ಕಾಗಿ ಅಮೆರಿಕದ ಸಹಾಯವನ್ನು ಕೋರಿದೆ. ಹಾಗೆ ನೋಡಿದರೆ ಅಮೆರಿಕ ಮೊದಲೇ ಎರಡು ದೇಶಗಳ ಜೊತೆ ಸಂಪರ್ಕದಲ್ಲಿತ್ತು. ಆದರೆ ಈಗ ಪಾಕ್‌ ನೇರವಾಗಿ ಮೊರೆ ಇಟ್ಟ ಕಾರಣ ಅಧಿಕೃತವಾಗಿ ಮಧ್ಯಪ್ರವೇಶ ಮಾಡಲು ಮುಂದಾಯಿತು.

ಮೇ 10 ರ ಮಧ್ಯಾಹ್ನದ ವೇಳೆಗೆ ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಅವರು ತಮ್ಮ ಭಾರತ ಡಿಜಿಎಂಒ ಲೆಫ್ಟಿನೆಂಟ್‌ ಜನರಲ್ ರಾಜೀವ್ ಘಾಯ್ ಅವರಿಗೆ ನೇರ ಕರೆ ಮಾಡಿ ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು. ಕೊನೆಗೆ ಸಂಜೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪತ್ರಿಕಾಗೋಷ್ಠಿಯಲ್ಲಿ ಎರಡು ದೇಶಗಳ ಮಧ್ಯೆ ಕದನವಿರಾಮ ನಡೆದಿರುವ ಬಗ್ಗೆ ದೃಢಪಡಿಸಿದರು.

Share This Article