– ಭಾರತೀಯ ಸೇನೆಯ ಯಶಸ್ಸಿಗಾಗಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಜಮೀರ್
ಬೆಂಗಳೂರು: ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed) ಪುನರುಚ್ಚರಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಹೇಳಿದ್ದೇವೆ. ನಾನು ಕೂಡಾ ಗಾಂಧಿ ನಗರದಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಸೈನಿಕರಿಗೆ ಹೆಚ್ಚು ಶಕ್ತಿ ಕೊಡಲು ಇಡೀ ದೇಶದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡ್ತಿದ್ದೇವೆ. ಸೈನಿಕರು ಯಶಸ್ವಿಯಾಗಬೇಕು ಅಂತ ನಾವು ಈ ಪ್ರಾರ್ಥನೆ ಮಾಡ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ
ಸೂಸೈಡ್ ಬಾಂಬರ್‌ಗೆ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಟೀಕೆ ಬಿಟ್ಟು ಇನ್ನೋನೂ ಗೊತ್ತಿಲ್ಲ. ನಾನು ದೇಶಕೋಸ್ಕರ ಬಲಿ ಆಗೋಕೆ ಸಿದ್ಧ ಅಂತ ಹೇಳಿದ್ದೇನೆ. ಈಗಲೂ ನನ್ನ ಮಾತಿಗೆ ನಾನು ಬದ್ಧ. ಈಗಲೂ ಹೇಳ್ತೀನಿ ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ. ಮೋದಿ, ಅಮಿತ್ ಶಾ ಅವರು ಅನುಮತಿ ಕೊಟ್ರೆ ಸೂಸೈಡ್ ಬಾಂಬರ್ ಆಗಿ ಹೋಗೋಕೆ ಸಿದ್ಧ. ನಮ್ಮ ದೇಶಕ್ಕಾಗಿ ಈಗಲೂ ನಾನು ಸೂಸೈಡ್ ಬಾಂಬರ್ ಆಗಿ ಹೋಗ್ತೀನಿ. ಸೈನಿಕರಿಗೆ ಹೆಚ್ಚು ಶಕ್ತಿ ಕೊಡಲಿ ಅಂತ ಅಲ್ಲಾ ಬಳಿ ಬೇಡಿ ಕೊಳ್ತೀನಿ ಎಂದು ತಿಳಿಸಿದರು.
ತಿರಂಗಾ ಯಾತ್ರೆಗೆ ಬಾರದ ಬಗ್ಗೆ ಮಾತನಾಡಿ, ನಾನು ತಿರಂಗಾ ಯಾತ್ರೆಗೆ ಬರಬೇಕಿತ್ತು. ಸ್ಲಂ ಬೋರ್ಡ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬರಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್
ಸಚಿವ ಸಂತೋಷ್ ಲಾಡ್ ಮಾತನಾಡಿ, 140 ಕೋಟಿ ಜನರಿಗೆ ಯಾರಿಗೆ ಅವಕಾಶ ಸಿಕ್ಕರೂ ಹೋಗ್ತಾರೆ. ಜಮೀರ್ ಅದೇ ಮನೋಭಾವದಲ್ಲಿ ಹೇಳ್ತಿದ್ದಾರೆ ಅಷ್ಟೆ ಎಂದರು. ಸೋಶಿಯಲ್ ಮೀಡಿಯಾದಲ್ಲಿ ಫೇಕ್ ವಿಡಿಯೋ ಹರಿದಾಡುತ್ತಿರೋ ಬಗ್ಗೆ ಪ್ರತಿಕ್ರಿಯಿಸಿ, ನೆಗೆಟಿವ್ ವಿಡಿಯೋಗಳನ್ನ ಯಾರೂ ಹಾಕಬೇಡಿ. ಸೇನೆ ಉತ್ತಮ ಕೆಲಸ ಮಾಡ್ತಿದೆ. ನಾವು ಸ್ವಲ್ಪ ಸಮಾಧಾನದಿಂದ ಇರಬೇಕು. ಇಂತಹ ಸುಳ್ಳು ವಿಡಿಯೋಗಳನ್ನ ಯಾರೂ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದರು.